ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವವು ಜ. 4ರಂದು ಆರಂಭಗೊಂಡು ಜ. 8ರ ತನಕ ಜರಗಲಿದೆ.
ಜ. 1ರಂದು ಚಪ್ಪರ ಮುಹೂರ್ತ ನಡೆಯಿತು. ಜ. 3ರಂದು ಬೆಳಿಗ್ಗೆ ಹಸಿರುವಾಣಿ ಸಂಗ್ರಹ ಪ್ರಾರಂಭಗೊಂಡು ಸಂಜೆ ಉಗ್ರಾಣ ಮುಹೂರ್ತ ನಡೆಯಿತು. ಜ. 4ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ ಬಳಿಕ ವಿವಿಧ ವೈದಿಕ ಕಾರ್ಯಗಳು, ದ.ಕ. ಜಿಲ್ಲೆಯ ಶೃಂಗೇರಿ ಗುರುದೇವತಾ ಭಜನಾ ಮಂಡಳಿಗಳ ವತಿಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ದೇವರ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ಬಳಿಕ ಅನ್ನಸಂತರ್ಪಣೆ ಜರಗಿತು ಸಂಜೆ ದೈವಗಳಿಗೆ ಪರ್ವ, ಮಹಾ ರಂಗಪೂಜೆ, ಉತ್ಸವ ಬಲಿ, ಪಲ್ಲಕಿ ಉತ್ಸವ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಜ. 5ರಂದು ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಸಂಜೆ ದೇವತಾ ಪ್ರಾರ್ಥನೆ ವಿವಿಧ ವೈದಿಕ ಕಾರ್ಯಗಳು, ಜ. 6ರಂದು ಧ್ವಜಾರೋಹಣ, ವಿವಿಧ ವೈದಿಕ ಕಾರ್ಯಕ್ರಮ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಮಹಾರಂಗಪೂಜೆ, ಉತ್ಸವ ಬಲಿ, ಬ್ರಹ್ಮ ರಥಾಧಿವಾಸ ನಡೆಯಿತು. ಜ. 7ರಂದು ವಿವಿಧ ವೈದಿಕ ಕಾರ್ಯಕ್ರಮಗಳು ನಡೆದು ಪೂರ್ವಾಹ್ನ ಬಲಿ ಹೊರಟು ಬ್ರಹ್ಮರಥಾರೋಹಣ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಿತು. ರಾತ್ರಿ ಬ್ರಹ್ಮ ರಥೋತ್ಸವ, ಸಿಡಿಮದ್ದು ಪ್ರದರ್ಶನ ಬಳ್ಪ ಬೆಡಿ, ಉತ್ಸವ ಬಲಿ, ಶಯನೋತ್ಸವ ನಡೆಯಿತು.
ಜ. 8ರಂದು ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ತುಲಾಭಾರ ಸೇವೆ, ಕನ್ನಿಕಾ ಪೂಜೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಜರಗಲಿದೆ. ಸಂಜೆ ಕುಮಾರಾಧಾರಾ ನದಿಗೆ ಶ್ರೀ ದೇವರ ಅವಭೃತಯಾತ್ರಾರಂಭ, ಕಟ್ಟೆಪೂಜೆ, ಅವಭೃತೋತ್ಸವ ನಡೆಯಲಿದೆ. ಜ. 7ರಂದು ಸಂಜೆ ನೃತ್ಯ ಭಜನಾ ಸಂಕೀರ್ತನೆ, ಬಳಿಕ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘ ಕಾಸರಗೋಡು ಇವರಿಂದ ನರಕಾಸುರ ವಧೆ, ಗರುಡ ಗರ್ವಭಂಗ ಬೊಂಬೆಯಾಟ ನಡೆಯಿತು.