ಐವತ್ತೊಕ್ಲು ಗ್ರಾಮದ ಪುಂಡಿಮನೆ ಕುಟುಂಬದ ಧರ್ಮದೈವ ಶ್ರೀ ರುದ್ರ ಚಾಮುಂಡಿ ಮತ್ತು ಪರಿವಾರ ದೈವಗಳ ಧರ್ಮನಡಾವಳಿ ಜ.6 ರಿಂದ ಜ.7. ತನಕ ಜರುಗಿತು.
ಜ.6ರಂದು ಬೆಳಿಗ್ಗೆ ನಾಗ ತಂಬಿಲ, ದೈವಗಳಿಗೆ ಶುದ್ದೀಕಲಶ ಮತ್ತು ಗಣ ಹೋಮ, ಮಧ್ಯಾಹ್ನ ಅನ್ನಅಂತರ್ಪಣೆ, ಸಂಜೆ ಭಂಡಾರ ತೆಗೆದು ರಾತ್ರಿ ಅನ್ನಸಂತರ್ಪಣೆ,ರಕ್ತೇಶ್ವರಿ , ಗುಳಿಗ, ಪಂಜುರ್ಲಿ, ಸತ್ಯದೇವತೆ, ಕೊರತಿ, ಪೊಟ್ಟ ಭೂತ, ಕಲ್ಲುರ್ಟಿ ಹಾಗೂ ಇತರ ದೈವಗಳ ನೇಮ ಜರುಗಿತು.
ಜ.7 ರಂದು ಧರ್ಮದೈವ ಶ್ರೀ ರುದ್ರ ಚಾಮುಂಡಿ ಮತ್ತು ಚಾಮುಂಡಿ ದೈವಗಳ ನೇಮ,ಗುಳಿಗ ದೈವದ ನೇಮ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಕುಟುಂಬಸ್ಥರು , ನೆಂಟರಿಷ್ಟರು,ಬಂಧು ಮಿತ್ರರು ಹಾಗೂ ಊರ ಸಮಸ್ತರು ಉಪಸ್ಥಿತರಿದ್ದು ಗಂಧ ಪ್ರಸಾದವನ್ನು ಸ್ವೀಕರಿಸಿದರು .