ಅಜ್ಜಾವರ ಗ್ರಾಮದ ಮೇನಾಲದಲ್ಲಿ ಮಾರ್ಚ್ 5, 6 ಮತ್ತು 7 ರಂದು ಶ್ರೀ ವಯನಾಟ್ಟ್ ಕುಲವನ್ ದೈವಂಕಟ್ಟು ಮಹೋತ್ಸವವು ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಜ. 12ರಂದು ಬೆಳಗ್ಗೆ ನಡೆಯಿತು.
ಮೇನಾಲ ಕುಟುಂಬದ ಯಜಮಾನರು ಹಾಗೂ ವಯನಾಟ್ಟ್ ಕುಲವನ್ ದೈವಂಕಟ್ಟು ಮಹೋತ್ಸವ ಸಮಿತಿಯ ಅಧ್ಯಕ್ಷ ಗುಡ್ಡಪ್ಪ ರೈ ಮೇನಾಲರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ನಿವೃತ್ತ ಪ್ರಾಂಶುಪಾಲ ಪ್ರೊ.ಜವರೇಗೌಡರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಯನಾಟ್ಟ್ ಕುಲವನ್ ದೈವಂಕಟ್ಟು ಮಹೋತ್ಸವ ಪ್ರಧಾನ ಕಾರ್ಯದರ್ಶಿ ರಾದಾಕೃಷ್ಣ ಪರಿವಾರಕಾನ, ಕೋಶಾಧಿಕಾರಿ ರಾಮಕೃಷ್ಣ ರೈ ಮೇನಾಲ, ಸಂಚಾಲಕ ಸುಬೋದ್ ಶೆಟ್ಟಿ ಮೇನಾಲ, ಕಾರ್ಯಾಧ್ಯಕ್ಷ ರವೀಂದ್ರನಾಥ ರೈ ಮೇನಾಲ, ವಿಜಯಕುಮಾರ್ ತುದಿಯಡ್ಕ, ದೈವಸ್ಥಾನದ ಅರ್ಚಕ ಕೃಷ್ಣ ಯಂ.ಕೆ., ಉಪಾಧ್ಯಕ್ಷ ಬಾಲಕೃಷ್ಣ ರೈ ಬಾಂದೊಟ್ಟು, ಸಂಜೀವ ಶೆಟ್ಟಿ ಬಲ್ಯ, ನಾರಾಯಣ ಬಾರ್ಪಣೆ, ನಾರಾಯಣ ರೈ ನಿವೃತ್ತ ಎ.ಎಸ್.ಐ., ಶ್ರೀ ತಂಬೂರಾಟಿ ಭಗವತಿ ಕ್ಷೇತ್ರದ ಉಪಾಧ್ಯಕ್ಷ ಪವಿತ್ರನ್ ಗುಂಡ್ಯ, ಪ್ರಸಾದ್ ರೈ ಮೇನಾಲ, ಪ್ರಮೋದ್ ರೈ ಮೇನಾಲ, ಕಮಲಾಕ್ಷ ರೈ ಮೇನಾಲ, ನಯನ ರೈ ಮೇನಾಲ, ಪ್ರಬೋದ್ ಶೆಟ್ಟಿ ಮೇನಾಲ, ನಾರಾಯಣ ಪಲ್ಲತಡ್ಕ, ರಾಮಣ್ಣ ಪೂಜಾರಿ ಪೊಡುಂಬ, ಪ್ರದೀಪ್ ಪೊಡುಂಬ, ರಾಜೇಶ್ ಶೆಟ್ಟಿ ಮೇನಾಲ, ಕಿರಣ ರೈ ಮೇನಾಲ, ಅರುಣ ರೈ ಮೇನಾಲ, ರಂಜಿತ್ ರೈ ಮೇನಾಲ, ಗುರುರಾಜ್ ಅಜ್ಜಾವರ, ಶಶ್ಮಿ ಭಟ್ ಅಜ್ಜಾವರ, ಸುಜಿತಾ ರೈ ಮೇನಾಲ, ಸಂಪತ್ ಶೆಟ್ಟಿ, ಶ್ರೀಧರ ಮೇನಾಲ, ನಾರಾಯಣ ಪಲ್ಲತಡ್ಕ, ವಿನೋದ್ ರೈ, ಶ್ರೀನಿವಾಸ ಶೆಟ್ಟಿ, ಪ್ರಭಾ ಬೆಳ್ಚಪ್ಪಾಡ, ಕೃಷ್ಣ ಸ್ಥಾನದಮನೆ, ರಾಮಚಂದ್ರ ಪಲ್ಲತಡ್ಕ, ದಾಮೋದರ ಗೌಡ ಕೆದ್ಕಾರ್, ಕಿಟ್ಟಣ್ಣ ರೈ ಇರಂತಮಜಲು, ಶ್ರವೀಣ್ ರೈ ಮೇನಾಲ, ಆನಂದ ಬೆಳ್ಚಪ್ಪಾಡ, ವಿಜಯ ಕರ್ಲಪ್ಪಾಡಿ ಮೊದಲಾದವರಿದ್ದರು.