ಜನವರಿ 19 ರಿಂದ 21 ರವರೆಗೆ ಪೈಂಬೆಚ್ಚಾಲಿನಲ್ಲಿ ಗ್ರಾಂಡ್ ಅಜ್ಮೀರ್ ನೇರ್ಚೆ 9ನೇ ವಾರ್ಷಿಕೋತ್ಸವ

0

ತ್ರಿದಿನ ಮಹಿಫ್ಲೇ ನಸೀಹ ಕಾರ್ಯಕ್ರಮ

ಹಯಾತುಲ್ ಇಸ್ಲಾಂ ಹಯರ್ ಸೆಕೆಂಡರಿ ಮದರಸ ಪೈಬೆಚ್ಚಾಲು ಇದರ ವತಿಯಿಂದ ಜನವರಿ 19 ರಿಂದ 21 ರವರೆಗೆ ಗ್ರಾಂಡ್ ಅಜ್ಮೀರ್ ನೇರ್ಚೆ 9ನೇ ವಾರ್ಷಿಕೋತ್ಸವ ಮತ್ತು ತ್ರಿದಿನ ಮಹಫಿಲೇ ನಸೀಹ ಕಾರ್ಯಕ್ರಮ ಪೈಂಬೆಚ್ಚಾಲು ಮಸೀದಿ ವಠಾರದಲ್ಲಿ ನಡೆಯಲಿದೆ.

ಜನವರಿ 19ರಂದು ಬೆಳಿಗ್ಗೆ ೫ ಗಂಟೆಗೆ ಮೌಲಿದ್ ಪಾರಾಯಣ ಹಾಗೂ ದುವಾ ಮಜ್ಲಿಸ್ ನಡೆಯಲಿದ್ದು ಈ ಕಾರ್ಯಕ್ರಮದ ನೇತೃತ್ವವನ್ನು ಸಯ್ಯಿದ್ ಕುಂಞಿ ಕೋಯಾ ತಂಙಳ್ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಕೇರಳದ ಖ್ಯಾತ ವಾಗ್ಮಿ ಶರೀಫ್ ಸಅದಿ ಮುನ್ನಿಪಾಡಿ ಮಾಡಲಿದ್ದು,
ಸ್ಥಳೀಯ ಮಸೀದಿ ಗೌರವ ಅಧ್ಯಕ್ಷ ಪಿಎಂ ಮೂಸಾ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ.


ಮಧ್ಯಾಹ್ನ ಜುಮಾ ನಮಾಝಿನ ಬಳಿಕ ಖತಮುಲ್ ಕುರಾನ್ ನಡೆದು ದುವಾ ನೇತೃತ್ವವನ್ನು ಕರ್ನಾಟಕ ರಾಜ್ಯ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ನೆರವೇರಿಸಲಿದ್ದಾರೆ.
ಬಳಿಕ ಸೈಯದ್ ಹುಸೈನ್ ಪಾಷಾ ತಂಙಳ್ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಖವ್ವಾಲಿ ಆಲಾಪನೆ ನಡೆಯಲಿದೆ.
ರಾತ್ರಿ 8 ಗಂಟೆಗೆ ಕೇರಳದ ಖ್ಯಾತ ಖವ್ವಾಲಿ ತಂಡದ ವತಿಯಿಂದ ಖಾಸಿಂ ಹಸನಿ ಖಾಮಿಲ್ ಸಕಾಫಿ ಪಾಲಕ್ಕಾಡ್ ಇವರ ನೇತೃತ್ವದಲ್ಲಿ ಪ್ರಕೀರ್ತನಾ ಹಾಗೂ ಖವ್ವಾಲಿ ನಡೆಯಲಿದೆ.
ಅಸ್ಸಯ್ಯದ್ ಉಮರ್ ಜಿಫ್ರಿ ತಂಙಳ್ ಕುಂಭಕ್ಕೋಡು ದುವಾ ನೇತೃತ್ವ ನೀಡಲಿದ್ದಾರೆ.

ಜನವರಿ 20ರಂದು ರಾತ್ರಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸಮಿತಿ ಅಧ್ಯಕ್ಷ ಟಿಎಂ ಅಬ್ದುಲ್ ರಹಮಾನ್ ವಹಿಸಲಿದ್ದಾರೆ.
ಆ ದಿನದ ಮುಖ್ಯಪ್ರಭಾಷಣವನ್ನು ಖ್ಯಾತ ಪಂಡಿತ ಲುಕ್ಮಾನುಲ್ ಹಕೀಮ್ ಸಕಾಫಿ ಪುಲ್ಲಾರ ನೀಡಲಿದ್ದಾರೆ.

ಜನವರಿ 21ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ಕೊಯಮ್ಮ ತಂಙಳ್ ವಹಿಸಿ ದುವಾಶೀರ್ವಚನ ನೀಡಲಿದ್ದಾರೆ.
ಮುಖ್ಯ ಪ್ರಭಾಷಣವನ್ನು ಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ನೆರವೇರಿಸಲಿದ್ದು ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಅಹದಲ್ ತಂಙಳ್ ಮುತ್ತನೂರು ಸಾಮೂಹಿಕ
ದುವಾ ಮಾಡಲಿದ್ದಾರೆ.
ಅಲ್ಲದೆ ವಿವಿಧ ಧಾರ್ಮಿಕ ಸಾಮಾಜಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.