ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.12ರಂದು ನೂತನ ಕಂಪ್ಯೂಟರ್ ಚೇಂಬರ್ ನ ಉದ್ಘಾಟನೆ ಹಾಗೂ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು . ಶಾಲಾ ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್ ರವರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಕಂಪ್ಯೂಟರ್ ಚೇಂಬರ್ ನ ಉದ್ಘಾಟನೆಯನ್ನು ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿದ ಲಯನ್ಸ್ ಜಲದುರ್ಗಾ ಬೆಳ್ಳಾರೆಯ ಅಧ್ಯಕ್ಷರಾದ ವಿಠಲ ಶೆಟ್ಟಿಯವರು ನೆರವೇರಿಸಿದರು.
ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಮತ್ತು ಕೌಶಲ್ಯ, ಲಾಭ-ನಷ್ಟ, ಗಣಿತದ ಲೆಕ್ಕಾಚಾರ, ಹಣದ ಮೌಲ್ಯದ ಬಗ್ಗೆ ಅರಿವು ಮೂಡಿಸಲು ಹಾಗೂ ಕೊಡುವ ಮತ್ತು ತೆಗೆದುಕೊಳ್ಳುವ, ಪದಾರ್ಥಗಳ ಗುಣಮಟ್ಟ ಬಗ್ಗೆ ತಿಳಿದುಕೊಂಡು ವ್ಯಾಪಾರ ಮಾಡುವ, ಅಷ್ಟೇ ಅಲ್ಲದೇ ಗ್ರಾಹಕರನ್ನು ತಮ್ಮೆಡೆಗೆ ಆಕರ್ಷಿಸುವ ಕೌಶಲ್ಯಗಳ ಅರಿವು ಮೂಡಿಸಲು, ಇದರೊಂದಿಗೆ ಪ್ರಾಮಾಣಿಕತೆ ಮೌಲ್ಯವನ್ನು ರೂಡಿಸಿಕೊಳ್ಳಲು ಇಲಾಖೆಯ ನಿಯಮದಂತೆ ಮೆಟ್ರಿಕ್ ಮೇಳ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪೆರುವಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಜಗನ್ನಾಥ ಪೂಜಾರಿಯವರು ಹಿಂಗಾರ ಅರಳಿಸುವುದರ ಮೂಲಕ
ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆದ ಗಿಡಗಳು, ತರಕಾರಿಗಳು, ಹಣ್ಣುಹಂಪಲುಗಳು ತಾವೇ ತಯಾರಿಸಿದ ತಂಪು ಪಾನೀಯಗಳು, ಸಿಹಿತಿಂಡಿ ತಿನಿಸುಗಳ ಜೊತೆಗೆ ಅಗತ್ಯವಾದ ಸಾಮಾಗ್ರಿಗಳನ್ನು ತಮ್ಮ ತಮ್ಮ ಪುಟ್ಟ ಪುಟ್ಟ ಸ್ಟಾಲ್ ಗಳಲ್ಲಿ ಮಾರಾಟ ಮಾಡಿದರು. ಮುಖ್ಯೋಪಾಧ್ಯಾಯರಾದ ತೇಜಪ್ಪ, ಎಸ್, ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಜಯ ಕುಮಾರ್ ಉಪಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಉಮೇಶ್, ಪಂಚಾಯತ್ ಸದಸ್ಯರಾದ ಪದ್ಮನಾಭ ಶೆಟ್ಟಿ, ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಪಿ.ಎನ್. ಭಟ್ , ಶಿಕ್ಷಕರು , ಪೋಷಕರು, ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.