ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಭಜನೆ ಹಾಗೂ ಭಕ್ತಿ ರಸಮಂಜರಿ ಕಾರ್ಯಕ್ರಮ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಪ್ರಯುಕ್ತ ಪಯಸ್ವಿನಿ ನದಿ ತಟದಲ್ಲಿರುವ ಶ್ರೀ ಗುರು ರಾಘವೇಂದ್ರ ಮಠದಲ್ಲಿ ವಿಶೇಷವಾಗಿ ಭಜನೆ ಹಾಗೂ ಸಾಂಸ್ಕೃತಿಕ ಸೌರಭ ಮತ್ತು ಭಕ್ತಿ, ಭಾವ ಜಾನಪದ ಗೀತೆಗಳ ಸುಗಮ ಸಂಗೀತ ಕಾರ್ಯಕ್ರಮವು
ಜ.12 ರಂದು ನಡೆಯಿತು.


ಸಂಜೆ ಮಠದ ತಂತ್ರಿವರ್ಯರಾದ ಹರಿ ಎಳಚಿತ್ತಾಯರವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ಮಠದ ಬೃಂದಾವನ ಸೇವಾ ಟ್ರಸ್ಟ್ ಅಧ್ಯಕ್ಷ
ಶ್ರೀಕೃಷ್ಣ ಸೋಮಯಾಗಿ ಸ್ವಾಗತಿಸಿದರು. ಟ್ರಸ್ಟಿನ ಪದಾಧಿಕಾರಿಗಳು ಹಾಗೂ ಮಠದ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


ಸ್ಥಳೀಯ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆ , ಬೇಬಿ | ಅವನಿ ಯವರ ನೃತ್ಯ ಹಾಗೂ ಯೋಗ ಪ್ರದರ್ಶನವಾಯಿತು. ರಾತ್ರಿ ಸಮಯದಲ್ಲಿ
ದೇವರ ಪಟ್ಟಣ ಸವಾರಿಯಾಗಿ ಅವಭೃತ ಸ್ನಾನಕ್ಕೆ ಬರುವ ತನಕ ಗಾಯಕ ಶಿವಪ್ರಸಾದ್ ಆಲೆಟ್ಟಿ ನೇತೃತ್ವದ
ಶಿವ ಸ್ವರ ಮೆಲೊಡೀಸ್ ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.
ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.