ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವ್ಯಕ್ತಿತ್ವ ವಿಕಸನದೊಂದಿಗೆ ದೇಶಕ್ಕೆ ರಾಷ್ಟ್ರ ಭಕ್ತರ ಕೊಡುಗೆಯಾಗಲಿದೆ- ನಳಿನ್ ಕುಮಾರ್ ಕಟೀಲ್
ಅಮರಮುಡ್ನೂರಿನ ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಎರಡನೇಯ ದಿನದ ಸಭಾ ಸಮಾರಂಭವು ಜ.13 ರಂದು ಸಂಜೆ ನಡೆಯಿತು.
ಶಾಲಾ ಆಡಳಿತ ಮಂಡಳಿಯ
ಅಧ್ಯಕ್ಷ ಮಾಜಿ ಸಚಿವ ಎಸ್.ಅಂಗಾರ ರವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಮಂಗಳೂರು ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ರವರು ಮಾತನಾಡಿ
” ದೇಶದಲ್ಲಿ ಶಿಕ್ಷಣಕಾಶಿ ಎಂಬ ಬಿರುದು ಪಡೆದ ಜಿಲ್ಲೆ ದಕ್ಷಿಣ ಕನ್ನಡ. ವ್ಯಾಪಾರೀಕರಣವಿಲ್ಲದೆ ಮೌಲ್ಯಧಾರಿತ ಶಿಕ್ಷಣ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿಕ್ಷಣ ಸಂಸ್ಥೆ ಚೊಕ್ಕಾಡಿ ಪ್ರೌಢಶಾಲೆ. ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯಲ್ಲಿ ಅನುಷ್ಠಾನಗೊಂಡಿರುವ ಹೊಸ ರಾಷ್ಟ್ರೀಯ ನೀತಿಯ ಗುರುಕುಲ ಮಾದರಿಯ ಶಿಕ್ಷಣದ ವ್ಯವಸ್ಥೆಯಿಂದ ವ್ಯಕ್ತಿತ್ವ ವಿಕಸನದೊಂದಿಗೆ ರಾಷ್ಟ್ರ ಭಕ್ತರನ್ನು ದೇಶಕ್ಕೆ ಕೊಡುಗೆ ನೀಡುವುದಕ್ಕೆ ಪೂರಕವಾಗುವುದು. ಮಾತೃಭಾಷೆಯಲ್ಲಿ ವಿದ್ಯಾರ್ಜನೆಗೈದ ಬಹಳ ಮಂದಿ ಇಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ನಾನು ಸರಕಾರಿ ಶಾಲೆಯ ವಿದ್ಯಾರ್ಥಿ ಇಂದು ಸಂಸದನಾಗಿದ್ದೇನೆ.
ಚೊಕ್ಕಾಡಿ ಶಾಲೆಯ ಹಳೆ ವಿದ್ಯಾರ್ಥಿ ಎಸ್.ಅಂಗಾರ ರವರು ಸಚಿವರಾದವರು. ಭ್ರಷ್ಟಾಚಾರ ರಹಿತ ಶಾಸಕರೆಂಬ ಹೆಗ್ಗಳಿಕೆ ಗಳಿಸಿಕೊಂಡವರು ಎಂದು ಹೇಳಿದರು.
ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಕೆ ರವರು ಮಾತನಾಡಿ
” ಸುವರ್ಣ ಮಹೋತ್ಸವ 50 ವರ್ಷಗಳ ಸಾರ್ಥಕ ದಿನಗಳನ್ನು ಪೂರೈಸಿ ಸಂಭ್ರಮಿಸುವ ದಿನ.
ಸಾಹಿತ್ಯ ಕ್ಷೇತ್ರದಲ್ಲಿ ಚೊಕ್ಕಾಡಿ ಎಂಬ ಊರಿಗೆ ಬಹಳಷ್ಟು ಮಹತ್ವವಿದೆ. ಬಡ ಕುಟುಂಬದಿಂದ ಕೃಷಿ ಕಾಯಕ ಮುಗಿಸಿಕೊಂಡು ನಡೆದು ಬಂದು ವಿದ್ಯಾರ್ಜನೆಗೈದ ಒಬ್ಬ ಸಾಮಾನ್ಯ ವ್ಯಕ್ತಿ ಆರು ಬಾರಿ ಶಾಸಕನಾಗಿ, ಸಚಿವನಾಗಿ ಕಲಿತ ಶಾಲೆಯ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿದಿರುವುದು ಶಾಲೆಯ ಶ್ರೇಷ್ಠತೆಯನ್ನು ಸಾರುತ್ತದೆ.
ಪ್ರತಿಯೊಂದು ಮಕ್ಕಳಲ್ಲಿ ಅಧ್ಬುತ ಶಕ್ತಿ ಇದೆ. ಅವರ ಮೇಲೆ ಮಾತಿನಿಂದ ಕುಗ್ಗಿಸಬಾರದು.
ಮಕ್ಕಳಲ್ಲಿರುವ ಶಕ್ತಿಯನ್ನು ಗುರುತಿಸಿ ಬೆಳೆಸಿ ಪೋಷಿಸುವ ಕೆಲಸ ಮಾಡಬೇಕು ಇದು ವಿದ್ಯಾಭ್ಯಾಸದ ಉದ್ದೇಶವಾಗಿರಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಖ್ಯಾತ ನ್ಯಾಯವಾದಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಎಲೆಕ್ರ್ಟಿಕ್
ವಿ ಲ್ಯಾಬ್ ಕಾಂ ಅಧ್ಯಕ್ಷ ಎ.ಜಿ.ವೆಂಕಟ್ರಮಣ, ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷಉದಯಕುಮಾರ್ ಬೆಟ್ಟ, ಅಮರಮುಡ್ನೂರು ಪಂಚಾಯತ್ ಸದಸ್ಯ ವೆಂಕಟ್ರಮಣ ಇಟ್ಟಿಗುಂಡಿ, ಶಾಲೆಯ ಸಂಚಾಲಕ ರಾಧಾಕೃಷ್ಣ ಬೊಳ್ಳೂರು, ಸಮಿತಿ ಉಪಾಧ್ಯಕ್ಷ ಅಣ್ಣಾಜಿ ಗೌಡ, ಕೋಶಾಧಿಕಾರಿ ಹರ್ಷವರ್ಧನ ಬೊಳ್ಳೂರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಮಾಯ್ಪಡ್ಕ, ವಿಶ್ವನಾಥ ಮೂಕಮಲೆ, ಆಂಗ್ಲ ಮಾಧ್ಯಮ ಶಾಲೆಯ
ಮುಖ್ಯ ಶಿಕ್ಷಕಿ ಚೈತ್ರಾ ಯು.ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ
ಹಿರಿಯ ವಿದ್ಯಾರ್ಥಿ ಎ.ಜಿ.ವೆಂಕಟ್ರಮಣ ರವರನ್ನು ಸಹಪಾಠಿಗಳಾದ ವಿ.ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್ ರವರು ಸನ್ಮಾನಿಸಿದರು.
ಸುವರ್ಣ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು.
ಶಾಲಾ ಮುಖ್ಯ ಶಿಕ್ಷಕ ಸಂಕೀರ್ಣ ಎಲ್. ಚೊಕ್ಕಾಡಿ ಪ್ರಾಸ್ತಾವಿಕ ಮಾತನಾಡಿದರು. ಸಮಿತಿಯ ಜತೆ ಕಾರ್ಯದರ್ಶಿ ತಿಮ್ಮಪ್ಪ ಗೌಡ ಕೊಂಡೆಬಾಯಿ ಸ್ವಾಗತಿಸಿದರು. ಆಡಳಿತ ಮಂಡಳಿಯ ನಿರ್ದೇಶಕ ಸುಪ್ರೀತ್ ಮೋಂಟಡ್ಕ ವಂದಿಸಿದರು.
ವಿಜೆ ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.
ಆಡಳಿತ ಮಂಡಳಿಯ ನಿರ್ದೇಶಕರು, ಸುವರ್ಣ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.