ಜ.16 – ಜ.19 ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹೋತ್ಸವ

0

ಕೊಲ್ಲಮೊಗ್ರದ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹೋತ್ಸವವು ಜ.16 ರಿಂದ ಜ.19 ರವರೆಗೆ ನಡೆಯಲಿದೆ.

ಜ.16 ರಂದು ಹಸಿರುವಾಣಿ ಸಮರ್ಪಣೆ ನಡೆಯಲಿದೆ. ಜ.17 ರಂದು ಬೆಳಗ್ಗೆ ಶ್ರೀ ಗಣಪತಿಹವನ, ಕಲಾಭಿಷೇಕ, ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕುಣಿತ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ವಿಶೇಷ ಕಾರ್ತಿಕ ಪೂಜೆ ನಡೆಯಲಿದ್ದು ರಾತ್ರಿ ಕಟ್ಟ ಚಾವಡಿಯಿಂದ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮವಿದೆ.  ಅಂದು ರಾತ್ರಿ 8.00 ಗಂಟೆಗೆ ಹರಿಕಥೆ ನಡೆಯಲಿದೆ. ರಾತ್ರಿ ಗಂಟೆ 9.30 ರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಜ.18  ಪೂರ್ವಾಹ್ನ ದೈವಗಳ ನೇಮ ನಡೆಯಲಿದ್ದು, ಅಪರಾಹ್ನ ದೇವಸ್ಥಾನದಿಂದ ಮಿತ್ತೋಡಿಗೆ  ಭಂಡಾರ ಹೋಗಲಿದೆ.   ಜ.19 ರಂದು ಮಿತ್ತೋಡಿಯಲ್ಲಿ ದೈವಗಳ ನೇಮ ನಡೆಯಲಿದೆ.