ಹಿರಿಯರ ಕ್ರೀಡಾಕೂಟ ಏನೆಕಲ್ಲಿನ ರಾಮಯ್ಯ ಎಂ.ಎಂ. ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಜ. 13, 14ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಯೇನೆಕಲ್ಲು ಗ್ರಾಮದ ಮಾದನಮನೆ ರಾಮಯ್ಯ ಎಂ.ಎಂ.ರವರು ವಿಶೇಷ ಸಾಧನೆ ಮಾಡಿ ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

800 ಮೀ ಓಟದಲ್ಲಿ ಪ್ರಥಮ, 400 ಮೀ. ಪ್ರಥಮ, 200 ಮೀ. ದ್ವಿತೀಯ, 4×100 ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಫೆ. 2ರಿಂದ 4ರ ತನಕ ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಈ ಹಿಂದೆ ಹಿರಿಯರ ಕ್ರೀಡಾಕೂಟದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು.