ಶತವರ್ಷಗಳ ಬಳಿಕ ಶ್ರೀ ದೇವಿಗೆ ನೂತನ ಬ್ರಹ್ಮರಥ,ಪಲ್ಲಕ್ಕಿ ಸಮರ್ಪಣೆ
ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶತಮಾನದ ಬಳಿಕ ಶ್ರೀ ದೇವಿಗೆ ಬ್ರಹ್ಮರಥ, ಪಲ್ಲಕ್ಕಿ ಸಮರ್ಪಣೆ ಜ.16 ರಂದು ನಡೆಯಿತು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಹಂಸ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಜಲದುರ್ಗಾದೇವಿಗೆ ನೂತನ ಬ್ರಹ್ಮರಥ ಹಾಗೂ ಪಲ್ಲಕ್ಕಿ ಸಮರ್ಪಣೆ ನಡೆಯಿತು.
ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮರಥ ಶುದ್ಧಿ ಕಲಶ ನಡೆದ ಬಳಿಕ ಬ್ರಹ್ಮರಥ ಸಮರ್ಪಣೆ ಮತ್ತು ಪಲ್ಲಕ್ಕಿ ಸಮರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸಮಿತಿ ಸದಸ್ಯರಾದ ಪಿ. ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ದಾಮೋದರ ನಾಯ್ಕ, ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ, ಭಾಗ್ಯಲಕ್ಷ್ಮಿ, ಯಶೋದ ಎ,ಎಸ್.
ರಥದ ಶಿಲ್ಪಿಗಳು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ, ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಶ್ರೀಮತಿ ರಾಜೀವಿ ಆರ್ .ರೈ, ಮಂಜಪ್ಪ ರೈ,ರಾಮಕೃಷ್ಣ ರಾವ್, ಸುಧಾನಂದ ಪೆರುವಾಜೆ,ಈಶ್ವರ ಆಳ್ವ ಬೇರ್ಯ,ದಯಾಕರ ಆಳ್ವ,ಜಗನ್ನಾಥ ರೈ, ಉಮೇಶ್ ಕೊಟ್ಟೆಕಾಯಿ, ಶ್ರೀನಾಥ್ ರೈ ಬಾಳಿಲ, ಸುನಿಲ್ ರೈ ಪುಡ್ಕಜೆ,ಕುಶಾಲಪ್ಪ ಪೆರುವಾಜೆ,ದೇವದಾಸ್ ಶೆಟ್ಟಿ,ಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು,ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ,ವಸಂತ ಆಚಾರ್ಯ ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.