ಪೆರುವಾಜೆ ದೇವಸ್ಥಾನದಲ್ಲಿ ಜಾತ್ರೋತ್ಸವ,ಬ್ರಹ್ಮರಥೋತ್ಸವ

0

ವಿಜೃಂಭಣೆಯಿಂದ ನಡೆದ ಹಸಿರುವಾಣಿ ಮೆರವಣಿಗೆ

ಮೆರುಗು ನೀಡಿದ ಗೊಂಬೆಕುಣಿತ,ನೃತ್ಯಭಜನೆ,ನಾಸಿಕ್ ಬ್ಯಾಂಡ್

ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವ ಪ್ರಾರಂಭಗೊಂಡಿದ್ದು ಮತ್ತು ಬ್ರಹ್ಮರಥೋತ್ಸವ ನಡೆಯಲಿದ್ದು ಇಂದು ಸಂಜೆ ವಿಜೃಂಭಣೆಯಿಂದ ಹಸಿರುವಾಣಿ ಮೆರವಣಿಗೆ ಬೆಳ್ಳಾರೆ ಮುಖ್ಯರಸ್ತೆಯಲ್ಲಿ ನಡೆಯಿತು.


ಬೆಳ್ಳಾರೆ ಪೇಟೆಯ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ತೆಂಗಿನಕಾಯಿ ಒಡೆಯುವುದರ ಮೂಲಕ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿದರು.
ಬಳಿಕ ಹಸಿರುವಾಣಿ ಮೆರವಣಿಗೆ ನಡೆಯಿತು.


ಪೂರ್ಣಕುಂಭ ಸ್ವಾಗತದೊಂದಿಗೆ ನಡೆದ ಮೆರವಣಿಗೆಯಲ್ಲಿ ವಾದ್ಯ ಬ್ಯಾಂಡ್, ಗೊಂಬೆ ಕುಣಿತ, ಮಕ್ಕಳ ನೃತ್ಯ ಭಜನೆ,ಸಿಂಗಾರಿ ಮೇಳ,ನಾಸಿಕ್ ಬ್ಯಾಂಡ್,ಯಕ್ಷಗಾನ ಶೈಲಿಯ ವೇಷಗಳು ಹಾಗೂ ವಿವಿಧ ವೇಷ ಭೂಷಣಗಳಿಂದ ಮೆರವಣಿಗೆ ಬೆಳ್ಳಾರೆ ಮುಖ್ಯಪೇಟೆಯಲ್ಲಿ ಸಾಗಿ ಪೆರುವಾಜೆ ದೇವಸ್ಥಾನದವರೆಗೆ ನಡೆಯಿತು.ಪೇಟೆಯಲ್ಲಿ ಅತ್ಯಂತ ಆಕರ್ಷಣೀಯವಾಗಿ ನಡೆದ ಮೆರವಣಿಗೆಯಲ್ಲಿ ವಾಹನಗಳಲ್ಲಿ ಹಸಿರುವಾಣಿ ಸಂಗ್ರಹಿಸಿಕೊಂಡು ಹೋಗಲಾಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸಮಿತಿ ಸದಸ್ಯರಾದ ಪಿ. ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ದಾಮೋದರ ನಾಯ್ಕ, ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ, ಭಾಗ್ಯಲಕ್ಷ್ಮಿ, ಯಶೋದ ಎ,ಎಸ್. ಹಾಗೂ ನೂರಾರು ಜನ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.