ಅಲ್ಪಸಂಖ್ಯಾತ ಸೊಸೈಟಿಯ ತೆರವಾದ ನಿರ್ದೇಶಕರ ಸ್ಥಾನಕ್ಕೆ ಇಬ್ಬರು ನಿರ್ದೇಶಕರ ನೇಮಕ

0

ಸುಳ್ಯ ತಾಲೂಕು ಅಲ್ಪಸಂಖ್ಯಾತ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ತೆರವಾಗಿದ್ದ ಇಬ್ಬರೂ ನಿರ್ದೇಶಕ ಸ್ಥಾನಕ್ಕೆ ಸುಳ್ಯ ಅಲ್ಪಸಂಖ್ಯಾತ ಸೊಸೈಟಿ ಮಾಜಿ ಅಧ್ಯಕ್ಷರಾಗಿದ್ದ ಎಸ್ ಎಂ ಬಾಪೂಸಾಹೇಬ್ ರವರು ಹಾಗೂ ಬೆಳ್ಳಾರೆ ಗ್ರಾಮಪಂಚಾಯತ್ ಮಾಜಿ ಸದಸ್ಯ ಕೆ.ಎಂ ಅಬ್ದುಲ್‌ ಹಮೀದ್ ಅಲ್ಪಾ ರವರನ್ನು ಜ.17 ರಂದು ನಡೆದ ಆಡಳಿತ ಸಮಿತಿಯಲ್ಲಿ ‌ನೇಮಕ ಮಾಡಲಾಗಿದೆ ಎಂದು ಸುಳ್ಯ ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ ತಿಳಿಸಿದ್ದಾರೆ.