ಕೆವಿಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ‘ಕೋನ್-ಬೀಮ್ ಕಂಪ್ಯೂಟೆಡ್ ಟೊಮೊಗ್ರಫಿ’ ಕಾರ್ಯಾಗಾರ

0

ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ನಿರಂತರ ದಂತ ಶಿಕ್ಷಣ ಕಾರ್ಯಕ್ರಮದ ಅಂಗವಾಗಿ ಅತಿಥಿ ಉಪನ್ಯಾಸ ಮತ್ತು ಕಾರ್ಯಾಗಾರವನ್ನು ಜ.18 ರಂದು ನಡೆಸಲಾಯಿತು. ಕೆವಿಜಿ ದಂತ ಮಹಾವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ। ಉಜ್ವಲ್ ಯು. ಜೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಜ್ಞಾನವನ್ನು ನವೀಕರಿಸುವುದು ಮತ್ತು ಉನ್ನತೀಕರಿಸುವುದು ನಮ್ಮ ವೃತ್ತಿಯ ಭಾಗವಾಗಬೇಕು, ಕಲಿಕೆ ನಿರಂತರವಾಗಿದ್ದರೆ ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು. ಪ್ರಾಂಶುಪಾಲರಾದ ಡಾ। ಮೋಕ್ಷ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಓರಲ್ ಮೆಡಿಸಿನ್-ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ। ಜಯಪ್ರಸಾದ ಆನೆಕಾರ ಸ್ವಾಗತಿಸಿ, ಡಾ। ಜಯಲಕ್ಷ್ಮಿ ವಂದಿಸಿದರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ‘ಪ್ಲಾನ್ಮೆಕಾ’ ಕಂಪೆನಿಯ ಡಾ। ನಿತಿನ್ ತಿಲಕ್ ಅವರು ‘ಕೋನ್-ಬೀಮ್ ಕಂಪ್ಯೂಟೆಡ್ ಟೊಮೊಗ್ರಫಿ’(CBCT) ಕುರಿತು ಉಪನ್ಯಾಸ ನೀಡಿದರು. ಪ್ರತಿನಿಧಿಗಳಿಗೆ ಒಂದು ದಿನದ ಕಾರ್ಯಾಗಾರವನ್ನೂ ನಡೆಸಲಾಯಿತು.

ಉಪನ್ಯಾಸಕರುಗಳಾದ ಡಾ। ಸೀಮಾ ಹಾಗೂ ಡಾ। ಹರಿಪ್ರಿಯ ಕಾರ್ಯಕ್ರಮ ಸಂಘಟಿಸುವಲ್ಲಿ ಸಹಕರಿಸಿದರು. ದಂತ ಮಹಾವಿದ್ಯಾಲಯದ ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ಉಪನ್ಯಾಸಕರು ಈ ಸಂದರ್ಭದಲ್ಲಿ ಹಾಜರಿದ್ದರು.