ಶ್ರೀಮತಿ ಡಾ. ಆಶಾಜ್ಯೋತಿ ಇವರು ಕನ್ನಡ ವಿಶ್ವ ವಿದ್ಯಾಲಯ ಹಂಪಿಯ ಅಭಿವೃದ್ಧಿ ಅಧ್ಯಯನ ವಿಭಾಗಕ್ಕೆ ಸಲ್ಲಿಸಿರುವ “ಡೆವಲಪ್‌ಮೆಂಟ್ ಆಂಡ್ ರಿಪಾಟ್ರಿಯೇಟ್ಸ್-ಎ ಸ್ಟಡಿ ಆಫ್ ಶ್ರೀಲಂಕನ್ ರಿಪಾಟ್ರಿಯೇಟ್ಸ್ ಸೆಟಲ್ಡ್ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್” ಎಂಬ ಮಹಾ ಪ್ರಬಂಧಕ್ಕೆ ವಾಣಿಜ್ಯ ಶಾಸ್ತ್ರದಲ್ಲಿ ಪಿಎಚ್.ಡಿ. ಪದವಿಯನ್ನು ಕನ್ನಡ ವಿಶ್ವ ವಿದ್ಯಾಲಯ ಹಂಪಿಯು ತನ್ನ 32ನೇ ಘಟಿಕೋತ್ಸವದಲ್ಲಿ ನೀಡಿರುತ್ತದೆ. ಈ ಮಹಾ ಪ್ರಬಂಧವನ್ನು ಡಾ.ಕೆ ರೇಣುಕಾ, ನಿವೃತ್ತ ಪ್ರಾಂಶುಪಾಲರು, ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಮಂಗಳೂರು, ಇವರ ಮಾರ್ಗದರ್ಶನದಲ್ಲಿ ಸಿದ್ಧ ಪಡಿಸಲಾಗಿರುತ್ತದೆ.
ಶ್ರೀಮತಿ ಡಾ. ಆಶಾಜ್ಯೋತಿ ಇವರು ಪ್ರಸ್ತುತ ಮಿಲಾಗ್ರಿಸ್ ಕಾಲೇಜು ಮಂಗಳೂರು, ಇಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸುಳ್ಯ ರಬ್ಬರ್ ವಿಭಾಗದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಗಣೇಶ್ ರಾವ್ ಇವರ ಧರ್ಮಪತ್ನಿ.