ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನ ಶಾಲಾ ವಾರ್ಷಿಕೋತ್ಸವ “ಉತ್ಕರ್ಷ-2024”

0

ಗುಣಮಟ್ಟದ ಶಿಕ್ಷಣ ಉತ್ತಮ ಭವಿಷ್ಯದ ಅಡಿಪಾಯ: ಮನೋವೈದ್ಯೆ ಡಾ.ಶೈಲಜಾ ಶಾಸ್ತ್ರಿ

ಮೌಲ್ಯಯುತ ಗುಣಮಟ್ಟದ ಶಿಕ್ಷಣ, ಆಧುನಿಕ ಸೌಲಭ್ಯಗಳು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವ್ಯವಸ್ಥೆ ನೀಡುತ್ತ ಕಳೆದ ಮೂರು ವರ್ಷಗಳಿಂದ ಅಂಜಲಿ ಮೊಂಟೆಸ್ಸರಿ ಸ್ಕೂಲ್ ಗ್ರಾಮೀಣ ಭಾಗದಲ್ಲಿ ಅಕ್ಷರಷಃ ಶಿಕ್ಷಣ ಕ್ರಾಂತಿ ಮಾಡುತ್ತಿದೆ. ಶಿಕ್ಷಣದ ಕಾಶಿ ಎಂದೇ ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡಿರುವ ಸುಳ್ಯದಲ್ಲಿ ಮೌಲ್ಯಯುತ ಶಿಕ್ಷಣ ನೀಡುತ್ತಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿದೆ ಎಂದು ಮನೋವೈದ್ಯೆ ಹಾಗೂ ಬೆಂಗಳೂರಿನ ಮೆಂಟಲ್ ಹೆಲ್ತ್ ಯುವರ್ ದೋಸ್ತ್ ಶಾಲೆಯ ನಿರ್ದೇಶಕಿ ಡಾ.ಶೈಲಜಾ ಶಾಸ್ತ್ರಿ ಹೇಳಿದರು.

ಅವರು ಜ.20 ರಂದು ಸುಳ್ಯದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ನಡೆದ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನ ಶಾಲಾ ವಾರ್ಷಿಕೋತ್ಸವ “ಉತ್ಕರ್ಷ -2024 ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕ್ರಾಂತಿ ಹರಿಸುತ್ತಿದೆ ಈ ಜ್ಞಾನ ದೇಗುಲ. ಈಗಿನ ಕಾಲಮಾನಕ್ಕೆ ಮೊಂಟೆಸ್ಸರಿ ಕಲಿಕಾ ಮಾದರಿ ಎಲ್ಲಾ ಮಕ್ಕಳಿಗೆ ಪ್ರಾಮುಖ್ಯವಾಗಿದೆ. ಅಂಜಲಿ ಮೊಂಟೆಸ್ಸರಿ ಸ್ಕೂಲ್ ಮುಂದಿನ ದಿನಗಳಲ್ಲಿ ಹೆಚ್ಚಿನ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವುದರ ಜೊತೆಗೆ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಗುರುತಿಸುವಂತಗಾಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಸುಳ್ಯ ಇದರ ಅಧ್ಯಕ್ಷ ಲ|ವೀರಪ್ಪ ಗೌಡ ಕಣ್ಕಲ್, ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನ ಅಧ್ಯಕ್ಷರಾದ ಶುಭಕರ ಬಿ.ಸಿ. , ನಿರ್ದೇಶಕಿ ಗೀತಾಂಜಲಿ ಟಿ.ಜಿ. , ಟ್ರಸ್ಟಿ ಸದಾನಂದ ಮಾವಂಜಿ ಉಪಸ್ಥಿತರಿದ್ದು, ಶುಭಹಾರೈಸಿದರು.

ಲಯನ್ಸ್ ಕ್ಲಬ್ ಮಹಿಳಾ ಸಮಿತಿಯ ಮಾಜಿ ಅಧ್ಯಕ್ಷೆ ನೇತ್ರಾವತಿ ಪಡ್ಡಂಬೈಲು ಹಾಗೂ ಹಲವು ಗಣ್ಯರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಡ್ಯಾನ್ಸ್ ಗುರುಗಳಾದ ವಸಂತ ಹಾಗೂ ಧೀರಜ್ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ , ಪೋಷಕರಿಂದ , ಶಾಲೆಯ ಹಿತೈಷಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪೋಷಕರಾದ ಶ್ರೀಮತಿ ಶಿಲ್ಪಾ ಸ್ವಾಗತಿಸಿ, ಶಾಲಾ ಮಕ್ಕಳು ಪ್ರಾರ್ಥಿಸಿ, ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ವ್ಯವಸ್ಥಾಪಕರಾದ ಪ್ರವೀಣ್ ಶಾಲೆಯ ಕುರಿತು ಮಾತನಾಡಿದರು. ಶಾಲಾ ನಿರ್ದೇಶಕಿ ಶ್ರೀಮತಿ ಗೀತಾಂಜಲಿ ಟಿ.ಜಿ. ವಾರ್ಷಿಕ ವರದಿ ವಾಚಿಸಿದರು.


ಶ್ರೀಮತಿ ಪೂಜಾಶ್ರೀ ವಿತೇಶ್ ಕೋಡಿ ವಂದಿಸಿ, ಸಹಾಯಕಿ ನಿರ್ಮಲ ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿ ಶ್ವೇತಾ ಸಹಕರಿಸಿದರು.