ಅಗಲಿದ ರಾಜೇಶ್ ಗುಂಡ್ಯ ರಿಗೆ ಜನನಿ ಫ್ರೆಂಡ್ಸ್ ಕ್ಲಬ್ ನಿಂದ ಶ್ರದ್ಧಾಂಜಲಿ ಸಭೆ

0

ಆಲೆಟ್ಟಿಯ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಸದಸ್ಯ ರಾಜೇಶ್ ಗುಂಡ್ಯ ರವರು ಇತ್ತೀಚೆಗೆ ಮೃತ ಪಟ್ಟಿದ್ದು ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆಯು ಕ್ಲಬ್ ಕಾರ್ಯಾಲಯದಲ್ಲಿ ‌ನಡೆಯಿತು.


ಕ್ಲಬ್ ಅಧ್ಯಕ್ಷ ತೀರ್ಥರಾಮ ವಾಲ್ತಾಜೆ ಅಧ್ಯಕ್ಷತೆ ವಹಿಸಿದ್ದರು.
ಆಲೆಟ್ಟಿ ಸಹಕಾರಿ ಸಂಘದ ನಿವೃತ್ತ ಸಿ.ಇ.ಒ ಸುಧಾಮ ಆಲೆಟ್ಟಿ ದೀಪ ಬೆಳಗಿಸಿ ಮೃತರ ಕುರಿತು ಗುಣಗಾನ ಮಾಡಿದರು. ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ವೀಣಾವಸಂತ ಆಲೆಟ್ಟಿ,
ಆಲೆಟ್ಟಿ ಸೊಸೈಟಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಪುಷ್ಪಾರ್ಚನೆ ಸಲ್ಲಿಸಿ ಮೌನ ಪ್ರಾರ್ಥನೆ ಸಮರ್ಪಿಸಿದರು.
ಗೌರವಾಧ್ಯಕ್ಷ ಲತೀಶ್ ಗುಂಡ್ಯ ಕಾರ್ಯಕ್ರಮ ನಿರ್ವಹಿಸಿದರು.