ಫೆ. 1 ಮತ್ತು 2 ರಂದು ನುಸ್ರತ್ ರೂಬಿ ಜ್ಯುಬಿಲಿ ಕಾರ್ಯಕ್ರಮ

0

ಸಾಮಾಜಿಕ ನಾಯಕರ ಸಮಾವೇಶ, ಸಾಧಕರಿಗೆ ಸನ್ಮಾನ, ಧಾರ್ಮಿಕ ಉಪನ್ಯಾಸ, ‘ಅರಿವಿನ್ ನಿಲಾವ್’ ಆಧ್ಯಾತ್ಮಿಕ ಮಜ್ಲಿಸ್

40ನೇ ವರ್ಷಕ್ಕೆ 4೦ ಕಾರ್ಯಕ್ರಮಗಳನ್ನು ಮಾಡಿದ ತೃಪ್ತಿ: ಲತೀಫ್ ಹರ್ಲಡ್ಕ

ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಎಲಿಮಲೆ ಇದರ ರೂಬಿ ಜ್ಯುಬಿಲಿ ಅಂಗವಾಗಿ ಫೆ. 1 ಮತ್ತು 2 ರಂದು ಸಾಮಾಜಿಕ ನಾಯಕರ ಸಮಾವೇಶ, ಸಾಧಕರಿಗೆ ಸನ್ಮಾನ, ಧಾರ್ಮಿಕ ಉಪನ್ಯಾಸ, ಆಧ್ಯಾತ್ಮಿಕ ಮಜ್ಲಿಸ್ ಮತ್ತು ನೂತನ ಕಚೇರಿಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಎಲಿಮಲೆ ಬದ್ರಿಯಾ ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಹೇಳಿದರು.


ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಫೆ. 1 ರಂದು ಗುರುವಾರ ಸಂಜೆ ರೂಬಿ ಜುಬಿಲಿ ಪ್ರಯುಕ್ತ ನಿರ್ಮಿಸಲಾದ ನೂತನ ಕಚೇರಿಯನ್ನು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಉದ್ಘಾಟಿಸಲಿದ್ದಾರೆ. ಸಾಮಾಜಿಕ ನಾಯಕರ ಸಮಾವೇಶ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಉದ್ಘಾಟಿಸಲಿದ್ದಾರೆ. ಸಾಧಕರಿಗೆ ಸನ್ಮಾನವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ನೆರವೇರಿಸಲಿದ್ದಾರೆ. ಕುಂಬ್ರ ಮರ್ಕಝುಲ್ ಹುದಾ ಇದರ ಉಪಾಧ್ಯಕ್ಷ ಡಾ. ಎಮ್ಮೆಸ್ಸೆಂ ಅಬ್ದುಲ್ ರಸೀದ್ ಝೈನಿ ಅಲ್ ಕಾಮಿಲ್ ಸಂದೇಶ ಭಾಷಣ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಎಲಿಮಲೆ ಬದ್ರಿಯಾ ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಅಬ್ದುಲ್ ನಾಸರ್ ಲಕ್ಕಿಸ್ಟಾರ್, ಕಣಚೂರು ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಮೋನು ಹಾಜಿ ಕಣಚೂರು, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ದೇವಚಳ್ಳ ಗ್ರಾ.ಪಂ. ಅದ್ಯಕ್ಷ ಶೈಲೇಶ್ ಅಂಬೆಕಲ್ಲು, ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್, ತಹಸೀಲ್ದಾರ್ ಮಂಜುನಾಥ, ವೃತ್ತ ನಿರೀಕ್ಷಕ ಮೋಹನ್ ಕೊಠಾರಿ, ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ, ಜಿ.ಪಂ. ಮಾಜಿ ಸದಸ್ಯ ಭರತ್ ಮುಂಡೋಡಿ, ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣುಭಟ್, ಕಾರ್ಮಿಕ ಮುಖಂಡ ಕೆ.ಪಿ. ಜಾನಿ ಮೊದಲಾದವರು ಭಾಗವಹಿಸಲಿದ್ದಾರೆ.


ರಾತ್ರಿ ನಡೆಯುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಉಮರ್ ಜೆಫ್ರಿ ತಂಙಳ್ ಮಲಪ್ಪುರಂ ಅವರ ನೇತೃತ್ವದಲ್ಲಿ ಪ್ರಾರ್ಥನಾ ಕೂಟ ನಡೆಯಲಿದೆ. ಖ್ಯಾತ ವಾಗ್ಮಿ ಕೇರಳದ ಪತ್ತನಂತಿಟ್ಟದ ಅಬ್ದುಲ್ ಅಝೀಝ್ ಅಬ್ರಾರಿ ಪ್ರಭಾಷಣ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಎಲಿಮಲೆಯ ಮಾಜಿ ಮುದರ‍್ರಿಸರಾದ ಹಸನ್ ಮುಸ್ಲಿಯಾರ್ ಆದೂರು, ಇಸ್ಮಾಹಿಲ್ ಅಹ್ಸನಿ ಸುಳ್ಯ, ಜೀರ್ಮುಕಿ ಮುಯ್ಯುದ್ದೀನ್ ಮಸ್ಜಿದ್ ಇಮಾಮರಾದ ಅಶ್ರಫ್ ಚೌಹರಿ, ಮೆತ್ತಡ್ಕ ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ ಖಾದರ್ ನಜೀಬ್ ಮುಸ್ಲಿಯಾರ್ ಗೌರವ ಉಪಸ್ಥಿತಿ ಇರಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಲೂಕಿನ ವಿವಿಧ ಮಸೀದಿಗಳ ಖತೀಬರು, ಮಸೀದಿಗಳ ಅಧ್ಯಕ್ಷರು, ನಾಯಕರು ಭಾಗವಹಿಸಲಿದ್ದಾರೆ.


ಅರಿವಿನ್ ನಿಲಾವ್
ಫೆ. 2ರಂದು ಶುಕ್ರವಾರ ‘ಅರಿವಿನ್ ನಿಲಾವ್’ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ. ಸಮಾರಂಭವನ್ನು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಞಳ್ ಕುನ್ನುಂಗೈ ಅವರ ನೇತೃತ್ವದಲ್ಲಿ ದುಅ ನಡೆಯಲಿದೆ. ಬಳಿಕ ಕೇರಳದ ಸಫ್ವಾನ್ ಸಖಾಫಿ ಪತ್ತಪಿರಿಯಂ ಇವರಿಂದ ‘ಅರಿವಿನ್ ನಿಲಾವ್’ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಂಗಳೂರಿನ ಸಾಮಾಜಿಕ ಮುಖಂಡ ಹೈದರ್ ಪರ್ತಿಪಾಡಿ, ತೆಕ್ಕಿಲ್ ಪ್ರಾತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಫೆಡರೇಶನ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಮಾಜಿ ವಕ್ಫ್ ಸದಸ್ಯ ಸಂಶುದ್ದೀನ್ ಅರಂಬೂರು, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಯುವ ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ, ಮಂಗಳೂರು ಸೋನಾ ಟ್ರೇಡಿಂಗ್ ಕಂಪೆನಿಯ ಮುನಾಫ್ ಗೋಡಿಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಎರಡನೇ ಮನೆ ಹಸ್ತಾಂತರ ನುಸ್ರತ್ ಸಹಕಾರದೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡ ಮನೆಯ ಹಸ್ತಾಂತರ ಕಾರ್ಯಕ್ರಮವು ಇದೇ ಕಾರ್ಯಕ್ರಮಕ್ಕೆ ಮುಂಚಿತವಾಗಿ ನಡೆಯಲಿದೆ.
ಮನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಹಸ್ತಾಂತರಿಸಲಿದ್ದಾರೆ.


40ನೇ ವರ್ಷದಲ್ಲಿ 40 ಕಾರ್ಯಕ್ರಮ
ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಕಳೆದ 40 ವರ್ಷಗಳಲ್ಲಿ ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. 40ನೇ ವರ್ಷದ ಕಾರ್ಯಕ್ರಮವನ್ನು 40 ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬಡವರಿಗೆ ಮನೆ ನಿರ್ಮಾಣ, ಬಡ ಹೆಣ್ಣುಮಕ್ಕಳ ಮಧುವೆಗೆ ನೆರವು, ಶಿಕ್ಷಣ, ಆರೋಗ್ಯ ನೆರವು, ಕುಡಿಯುವ ನೀರಿನ ಘಟಕ ಸ್ಥಾಪನೆ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 20 ಲಕ್ಷಕ್ಕೂ ಹೆಚ್ಚು ಮೊತ್ತದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ಹರ್ಲಡ್ಕ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ಹರ್ಲಡ್ಕ, ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ, ಕಾರ್ಯದರ್ಶಿಗಳಾದ ಸಿದ್ದೀಕ್ ಎಲಿಮಲೆ, ಅಶ್ರಫ್ ಜಿ.ಎ.ಕೆ, ನಿರ್ದೇಶಕ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.