ಅಯೋಧ್ಯೆಯಲ್ಲಿ ಶ್ರೀಬಾಲರಾಮನ ಪ್ರತಿಷ್ಠೆ ನಡೆಯುವ ಹಿನ್ನೆಲೆಯಲ್ಲಿ ಇಂದು ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಂಜನೇಯ ಸನ್ನಿಧಿಯಲ್ಲಿ ಸ್ಥಳೀಯ ಭಜನಾಶಕ್ತರಿಂದ ವಿಶೇಷ ಭಜನಾ ಕಾರ್ಯಕ್ರಮ ರಾಮನಾಮ ಸಂಕೀರ್ತನೆ ನಡೆಯಿತು. ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಎಂ.ವಿ. ಶ್ರೀವತ್ಸ ಪೂಜಾ ಕಾರ್ಯ ನೆರವೇರಿಸಿದರು. ಅಯೋಧ್ಯಾ ಕರಸೇವೆಯಲ್ಲಿ ಭಾಗವಹಿಸಿದ್ದ ವೆಂಕಟ್ರಮಣ ಗೌಡ ಜಾಕೆಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.