ವಿಜ್ರಂಭಣೆಯಿಂದ ನಡೆದ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವರ ಜಾತ್ರೋತ್ಸವ

0

ಸುಳ್ಯ ತಾಲೂಕು ಹಾಗೂ ಕಾಸರಗೋಡಿನ ಗಡಿಪ್ರದೇಶದ ಊರಿನಲ್ಲಿರುವ ಇತಿಹಾಸ ಪ್ರಸಿದ್ಧ, ಕಾರಣಿಕ ಕ್ಷೇತ್ರ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವರ ಜಾತ್ರೋತ್ಸವ ವವು ಜ.೨೩ರವರೆಗೆ ನಡೆಯಲಿದ್ದು,
ಜ.೨೦ರಂದು ನಡು ಬೆಳಕು, ಕುಣಿತ ಭಜನೆ, ಧಾರ್ಮಿಕ ಉಪನ್ಯಾಸ, ಜಾನಪದ ನೃತ್ಯಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಜ.೨೧ರಂದು ನಡು ದೀಪೋತ್ಸವ, ಭಜನೆ, ತಿರುವಾದಿರ, ಭರತನಾಟ್ಯ, ಜಾನಪದ ನೃತ್ಯ, ಧಾರ್ಮಿಕ ಕಾರ್ಯಕ್ರಮ ಗಳು ನಡೆಯಿತು.

ಜ.೨೨ರಂದು ಶ್ರೀ ದೇವರ ನೃತ್ಯೋತ್ಸವ, ಸಿಡಿಮದ್ದು ಪ್ರದರ್ಶನ, ಧಾರ್ಮಿಕ ಉಪನ್ಯಾಸ, ತಿರುವಾದಿರ, ಜಾನಪದ ನೃತ್ಯಗಳು, ಧಾರ್ಮಿಕ ಕಾರ್ಯಕ್ರಮ ಗಳು ನಡೆಯಿತು. ಈ ಸಂದರ್ಭದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು, ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

ಜ.೨೩ರಂದು ಆರಾಟು ಮಹೋತ್ಸವ, ಭಕ್ತಿಗಾನ ಸುಧಾ, ಆರಾಟು ಮೆರವಣಿಗೆ ನಡೆಯಿತು.