ಸೆಲ್ ಹೌಸ್ ಮೊಬೈಲ್ ನಲ್ಲಿ ಉಚಿತ ಕೂಪನ್ ನ ಬಂಪರ್ ಬಹುಮಾನಗಳ ವಿಜೇತರ ಆಯ್ಕೆ

0

ಸುಳ್ಯದ ಮುಖ್ಯರಸ್ತೆಯ ದ್ವಾರಕ ಹೋಟೆಲ್ ಮುಂಭಾಗದಲ್ಲಿರುವ ಸೆಲ್ ಹೌಸ್ ಮೊಬೈಲ್ ನಲ್ಲಿ ದಸರಾ,ದೀಪಾವಳಿ, ಹೊಸ ವರ್ಷದ ಅಂಗವಾಗಿ ಹಮ್ಮಿಕೊಂಡಿರುವ ಉಚಿತ ಕೂಪನ್ ನ ಬಂಪರ್ ಬಹುಮಾನಗಳ ಡ್ರಾ ಇಂದು (ಜ.25 )ಸಂಜೆ ನಡೆಯಿತು.


ಈ ಸಂದರ್ಭದಲ್ಲಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕೆ.ಟಿ.ವಿಶ್ವನಾಥ, ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯ ಸದಾನಂದ ಮಾವಜಿ, ಉದ್ಯಮಿಗಳಾದ ಉಂಬಾಯಿ, ಮಜೀದ್ ನಡುವಡ್ಕ, ಚಂದ್ರಶೇಖರ ನಂಜೆ, ಹಸನ್ ಹಾಜಿ,‌ ಸುಳ್ಯ ಮೊಬೈಲ್ ಅಸೋಸಿಯೇಷನ್ ನ ಅಧ್ಯಕ್ಷ ರಹೀಮ್ ಪಟೇಲ್,ಅಹಮ್ಮದ್ ದಿಯಾ ಫ್ಯಾಶನ್, ಮಜೀದ್ ಸಿಟಿ ಮೆಡಿಕಲ್, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ,ಜಿ.ಎಂ.ಅಬ್ದುಲ್ಲ ಗೂನಡ್ಕ, ಸಂಸ್ಥೆಯ ಮಾಲಕರಾದ ಹ್ಯಾರಿಸ್ ಉಪಸ್ಥಿತರಿದ್ದರು. ಸುದ್ದಿ ವರದಿಗಾರ ಹಸೈನಾರ್ ಜಯನಗರ ನಿರೂಪಿಸಿದರು.


ಗಣ್ಯರು ಬಂಪರ್ ಬಹುಮಾನವಾದ ಹೀರೋ ಬೈಕ್,ಹಾಗೂ ಸ್ಮಾರ್ಟ್ ವಾಚ್, ಇಯರ್ ಬಡ್ಸ್, ನೆಕ್ ಬ್ಯಾಂಡ್ ಹಾಗೂ 5 ಆಕರ್ಷಕ ಬಹುಮಾನಗಳ ಡ್ರಾ ನೆರವೇರಿಸಿದರು.