ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಬೆಳ್ಳಿ ಹಬ್ಬ ಸಂಭ್ರಮ

0

ಅಹಂ ಇಟ್ಟುಕೊಳ್ಳದೆ, ಎಲ್ಲರೊಂದಿಗೆ ಬೆರೆಯುವ ರಿಕ್ಷಾ ಚಾಲಕರ ಸೇವೆ ಶ್ಲಾಘನೀಯ : ಶಾಸಕಿ ಭಾಗೀರಥಿ ಮುರುಳ್ಯ

ರಿಕ್ಷಾ ಚಾಲಕರು ಆಪದ್ಬಾಂಧವರು. ಬದ್ಧತೆಯಿಂದ ಕೆಲಸ ಮಾಡುತ್ತಾರೆ : ಎಸ್.ಅಂಗಾರ

“ನಾನು ಎಂಬ ಅಹಂ ಇಟ್ಟುಕೊಳ್ಳದೆ ಎಲ್ಲರೊಂದಿಗೆ ಒಂದಾಗಿ ಬೆರೆಯುವ ನಿರಂತರ ಒಗ್ಗಟ್ಟಿನಲ್ಲಿ ಸಮಾಜದಲ್ಲಿ ಸೇವೆ ನೀಡುತ್ತಿರುವ ರಿಕ್ಷಾ ಚಾಲಕರ ಸೇವೆ ಶ್ಲಾಘನೀಯ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಜ.26ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆದ ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಬೆಳ್ಳಿ ಹಬ್ಬ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಮಾಜಿ ಸಚಿವ ಎಸ್.ಅಂಗಾರರು ಮಾತನಾಡಿ “ರಿಕ್ಷಾ ಚಾಲಕರು ಆಪದ್ಬಾಂಧವರು. ಕಷ್ಟದಲ್ಲಿ ಯಾರೇ ಇದ್ದರೂ ರಾತ್ರಿ ಹಗಲೆನ್ನದೇ ಯಾವುದೇ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೇ ಕರೆದಲ್ಲಿಗೆ ಹೋಗಿ ಬದ್ಧತೆಯಿಂದ ಸೇವೆ ಮಾಡುತ್ತಾರೆ. ತಮ್ಮ ಸಂಘಟನೆಯ ವಿಚಾರಕ್ಕೆ ಬದ್ಧರಾಗಿ ಸಾರ್ವಜನಿಕರ ವಿಶ್ವಾಸವನ್ನು ಗಳಿಸಿ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಾರ್ಯದ ಕುರಿತು ನಮಗೆ ಅಭಿಮಾನ ಇದೆ” ಎಂದು‌ ಹೇಳಿದರು.

ರಿಕ್ಷಾ ಚಾಲಕರ ಸಂಘದ ತಾಲೂಕು ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಣಿಪಾಲ ಯುನಿವರ್ಸಿಟಿ ಮಜ್ದೂರು ಯೂನಿಯನ್ ನ ಜನರಲ್ ಸೆಕ್ರೆಟರಿ ಪುರುಷೋತ್ತಮ ಕೆ.ಎನ್., ಸುಳ್ಯ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಕಿಶೋರಿ ಶೇಟ್, ಭಾರತೀಯ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು, ಸುಳ್ಯ ತಾಲೂಕು ಅಟೋ ರಿಕ್ಷಾ ಯೂನಿಯನ್ ಸ್ಥಾಪಕಾಧ್ಯಕ್ಷ ಗೋಪಾಲಕೃಷ್ಣ ಭಟ್, ಯೂನಿಯನ್ ನ ಕಾನೂನು ಸಲಹೆಗಾರ ಭಾಸ್ಕರ್ ರಾವ್ ಭಾಗವಹಿಸಿದ್ದರು.

ಸುಬ್ರಹ್ಮಣ್ಯ ಘಟಕದ ಅಧ್ಯಕ್ಷ ದಿನೇಶ್ ಶಿರಾಡಿ, ಪಂಜ ಘಟಕದ ಅಧ್ಯಕ್ಷ ಮನೋಹರ ಕಾರ್ಜ, ಹರಿಹರ ಘಟಕದ ಅಧ್ಯಕ್ಷ ದಯಾನಂದ, ಗುತ್ತಿಗಾರು ಘಟಕದ ಅಧ್ಯಕ್ಷ ವಿಶ್ವನಾಥ ಅಚ್ರಪ್ಪಾಡಿ, ಕುಕ್ಕುಜಡ್ಕ ಘಟಕದ ಅಧ್ಯಕ್ಷ ಸತೀಶ್ ಪಿಲಿಕಜೆ, ಜಾಲ್ಸೂರು ಘಟಕದ ಅಧ್ಯಕ್ಷ ಗೋಪಾಲ ಅಡ್ಕಾರು, ಪೆರಾಜೆ ಘಟಕದ ಅಧ್ಯಕ್ಷ ಚಂದ್ರಶೇಖರ ಕೊಡ್ಯಗುಂಡಿ, ಕಲ್ಲುಗುಂಡಿ ಘಟಕದ ಅಧ್ಯಕ್ಷ ಕೇಶವ ಬಂಗ್ಲೆಗುಡ್ಡೆ, ಯೂನಿಯನ್ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಕೋಶಾಧಿಕಾರಿ ನಿತ್ಯಾನಂದ ಎ. ವೇದಿಕೆಯಲ್ಲಿ ಇದ್ದರು.

ಶೈಕ್ಷಣಿಕ ಸಾಧಕ ರಿಕ್ಷಾಚಾಲಕರ ಸಂಘ – ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕು. ಕ್ಷಮಾ ಪ್ರಾರ್ಥಿಸಿದರು. ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಉಬರಡ್ಕ ಸ್ವಾಗತಿಸಿದರು. ಶ್ರೀಮತಿ ಶ್ರೀದೇವಿ ನಾಗರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.