ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಪೈಂಬೆಚ್ಚಾಲು ಸರಕಾರಿ ಶಾಲೆಯಲ್ಲಿ ಸಂಭ್ರಮ ಸಡಗರದಿಂದ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಬ್ದುಲ್ ಫೈಝಿಯವರು ಧ್ವಜಾರೋಹಣಗೈದು,ಭಾರತದ ಸರ್ವ ಪ್ರಜೆಗೂ ಸಮಾನತೆ, ಶಿಕ್ಷಣ, ಇತರೆ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಜಾರಿಗೆ ತರಲು ಶ್ರಮಿಸಿದ ಎಲ್ಲ ನಾಯಕರನ್ನು, ಅವರ ಸಾಧನೆಯನ್ನು ನೆನೆದು, ಸಂವಿಧಾನದ ಮಹತ್ವವನ್ನು ತಿಳಿಸಿದರು. ತದನಂತರ ಸಭಾ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಪುಷ್ಪಾವತಿ ಕೂಡೆಂಬಿ ವಹಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿಯವರು ಮಾಡಿದರು. ಪಂಚಾಯತ್ ಸದಸ್ಯರಾದ ಧರ್ಮಪಾಲ ಕೊಯಂಗಾಜೆಯವರು ಮಾತನಾಡಿ ಗಣರಾಜ್ಯೋತ್ಸವದ ಆಚರಣೆಯ ಮಹತ್ವತೆಯ ಬಗ್ಗೆ ತಿಳಿಸಿದರು.
ವಕೀಲರಾದ ಮೂಸಾ ಪೈಂಬೆಚಾಲು,ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ಕೊಲ್ಚಾರ್,ಶ್ರೀ ವಿಷ್ಣು ಕಲಾ ಸಂಘದ ಸದಸ್ಯ ಶಶಿಧರ ಕೂಡೆಂಬಿ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಎಂ ವೈ ಎಸ್ ಅಧ್ಯಕ್ಷರಾದ ರಫೀಕ್ ಪೈಂಬೆಚ್ಚಾಲು, ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಜಲಜಾಕ್ಷಿ ಕೊಯಿಂಗಾಜೆ ವಂದಿಸಿದರು. ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಪ್ರತಿಮಾರವರು ನಿರೂಪಿಸಿದರು. ಈ ಸಂದರ್ಭ ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು, ಶಾಲಾ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ದೇಶ ಭಕ್ತಿಯನ್ನು ಸಾರುವ ಸಾಂಸ್ಕೃತಿಕ ಹಲವಾರು ಕಾರ್ಯಕ್ರಮಗಳು ಮೂಡಿ ಬಂದವು.
ಮದ್ಯಾಹ್ನದ ಊಟದ ವ್ಯವಸ್ತೆಯನ್ನು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಆರಿಶ್ ಪೈಂಬೆಚ್ಚಾಲು ಮಾಡಿರುತ್ತಾರೆ. ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಯ ಬಹುಮಾನವನ್ನು ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿಯವರು ನೀಡಿ ಸಹಕರಿಸಿದರು
ಅಡುಗೆಯ ವ್ಯವಸ್ತೆಯನ್ನು ಕುಡೆಂಬಿ ಶ್ರೀ ವಿಷ್ಣು ಕ್ರೀಡಾ ಮತ್ತು ಕಲಾ ಸಂಗದ ಸದಸ್ಯರು ನೆರವೇರಿಸಿ ಕೊಟ್ಟರು.