ಫೆ.2 ರಿಂದ ಅಜ್ಜಾವರ ಮೇನಾಲ ಮಖಾಂ ಉರೂಸ್ ಪ್ರಾರಂಭ

0

ಫೆ.6 ರಂದು ಉರೂಸ್ ಸಮಾರೋಪ ಹಾಗೂ ಸೌಹಾರ್ದ ಸಂಗಮ

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಹಾಗೂ 5 ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ಅಜ್ಜಾವರ ಮತ್ತು ಮೇನಾಲ ಮಖಾಂ ವಠಾರದಲ್ಲಿ‌ ನಡೆಯಲಿದೆ ಎಂದು ಅಜ್ಜಾವರ ಜುಮ್ಮಾ ಮಸೀದಿ ಕಮಿಟಿ ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ ಜ.27 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಫೆ.2 ರಂದು ಉರೂಸ್ ಸಮಾರಂಭವನ್ನು ಸಯ್ಯದ್ ಝೈನುಲ್ ಅಬಿದಿನ್ ಜಿಫ್ರಿ ತಂಙಳ್ ಬೆಳ್ತಂಗಡಿ ಉದ್ಘಾಟಿಸಲಿದ್ದಾರೆ.
ಅಜ್ಜಾವರ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್‌ ಖಾದರ್ ಮುನವ್ವರಿ ಧಾರ್ಮಿಕ ಪ್ರಬಾಷಣ ಮಾಡಲಿದ್ದಾರೆ.
ಫೆ 3 ರಂದು ಶನಿವಾರ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ರಿಯಾಜ್ ಪೈಝಿ ಎಮ್ಮೆಮಾಡು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಫೆ.4 ರಂದು ಮೆನಾಲ ದರ್ಗಾ ಶರೀಫ್ ನಲ್ಲಿ ಮಗರಿಬ್ ನಮಾಜ್ ಬಳಿಕ ಮಖಾಂ ಅಲಂಕಾರ ಮತ್ತು ಝಿಕ್ರ್ ಹಲ್ಕ ಕಾರ್ಯಕ್ರಮ ನಡೆಯಲಿದೆ.
ದ್ಸಿಕ್ರ್ ಹಲ್ಕಾ ನೇತ್ರತ್ವ ಹಾಗೂ ಉದ್ಘಾಟನೆಯನ್ನು ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ದುಗಲಡ್ಕ ರವರು ವಹಿಸಲಿದ್ದಾರೆ.
ನಂತರ ನಡೆಯಲಿರುವ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮದಲ್ಲಿ ಅಬ್ದುಲ್‌ ರಜಾಕ್ ಅಬ್ರಾರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.


.

ಫೆ.5 ರಂದು ಸೋಮವಾರ ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸಯ್ಯದ್ ಹಕೀಂ ತಂಙಳ್ ರವರು ದುವಾಶಿರ್ವಚನ ಮಾಡಲಿದ್ದಾರೆ.
ಮಾಯಿನ್ ಮನ್ನಾನಿ ವೆಂಬಯಾಂ ರವರು ಧಾರ್ಮಿಕ ಉಪನ್ಯಾಸ ಮಾಡಲಿದ್ದಾರೆ.

ಫೆ. 6 ರಂದು ಉರೂಸ್ ಸಮಾರೋಪ ಹಾಗೂ ಸೌಹಾರ್ದ ಸಮಾರಂಭ ಕಾರ್ಯಕ್ರಮ ನಡೆಯಲಿದೆ.
ಸೌಹಾರ್ದ ಸಮಾರಂಭ ಕಾರ್ಯಕ್ರಮವು ಸಂಜೆ 7 ಗಂಟೆಗೆ ಪ್ರಾರಂಭಗೊಳ್ಳಲಿದೆ.
ಸೌಹಾರ್ದ ಸಮಾರಂಭದ ಅಧ್ಯಕ್ಷತೆಯನ್ನು ದರ್ಗಾ ಶರೀಫ್ ಸ್ಥಳ ಮುಖ್ಯಸ್ಥರಾದ ಗುಡಪ್ಪ ರೈ ವಹಿಸಲಿದ್ದಾರೆ.
ಎಸ್ ಎಸ್ ಎಸ್ ಎಸ್ ಎಫ್ ಟ್ರೆಂಡ್ ಸಂಚಾಲಕ ಇಕ್ಬಾಲ್ ಬಾಳಿಲ,ಲಯನ್ಸ್ ಮಾಜಿ ಗವರ್ನರ್ ಎಂ ಬಿ ಸದಾಶಿವ ಸೌಹಾರ್ದ ಸಮಾರಂಭ ಮಾತನಾಡಲಿದ್ದಾರೆ.

ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಅಜ್ಜಾವರ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್‌ ಖಾದರ್ ಮುನವ್ವರಿ ದುವಾಶಿರ್ವಚನದೊಂದಿಗೆ ಉರೂಸ್ ಸಮಾರೋಪ ಸಮಾರಂಭ ಉದ್ಘಾಟಿಸಲಿದ್ದಾರೆ.
ಪ್ರಖ್ಯಾತ ವಾಗ್ಮಿ ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತನಾಪುರಂ
ಮುಖ್ಯ ಪ್ರಬಾಷಣ ಮಾಡಲಿದ್ದಾರೆ.ಕರ್ನಾಟಕ ರಾಜ್ಯ ವಿಧಾನ ಸಭಾಧ್ಯಕ್ಷರಾದ ಯುಟಿ ಖಾದರ್ ಹಾಗೂ ಅನೇಕ ಧಾರ್ಮಿಕ ,ರಾಜಕೀಯ ಮುಂಖಡರು ಬಾಗವಹಿಸಲಿದ್ದಾರೆ.
ಸಮಾರೋಪ
ಕೊನೆಯ ಅನ್ನದಾನ ವಿತರಣೆ ನಡೆಯಲಿದೆ ಎಂದು ಅಜ್ಜಾವರ ಮೇನಾಲ ಜಮಾಯತ್ ಕಮಿಟಿಯವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್‌ ಖಾದರ್,ಉಪಾಹಾರ ಅಂದ ಹಾಜಿ ಪ್ರಗತಿ, ಕೋಶಾಧಿಕಾರಿ ಶರೀಫ್ ರಿಲಾಕ್ಸ್,ಜಮಾಯತ್ ಕಮಿಟಿ ಸದಸ್ಯರಾದ ಇಬ್ರಾಹಿಂ ಬಯಂಬು,ಸಿದ್ದೀಕ್ ಡೆಲ್ಮಾ ಮೊದಲಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು