ಜ.31: ಪಂಜ-ಪೈಂದೋಡಿ ಶ್ರೀ ಸುಬ್ರಾಯ ದೇವಳದ ಪ್ರತಿಷ್ಠಾ ವಾರ್ಷಿಕೋತ್ಸವ

0

ಪಂಜದ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನ ಇದರ ಪ್ರತಿಷ್ಠಾ ವಾರ್ಷಿಕೋತ್ಸವವು ಜ. 31.ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರುಗಲಿದೆ.

ಜ.31ರಂದು ಪೂ.ಗಂ.7 ರಿಂದ ಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ, ಆಶ್ಲೇಷ ಬಲಿ ಪೂಜೆ, ಕಲಶಾಭಿಷೇಕ, ದೈವಗಳಿಗೆ ಮತ್ತು ನಾಗದೇವರಿಗೆ ತಂಬಿಲ,ಮಧ್ಯಾಹ್ನ ಗಂ.12ಕ್ಕೆಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.

ರಾತ್ರಿ ಗಂ.8.30ಕ್ಕೆ ಶ್ರೀ ದೇವರಿಗೆ ರಂಗಪೂಜೆ, ವೈದಿಕ ಮಂತ್ರಾಕ್ಷತೆ ,ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರಗಲಿದೆ.

ಜ.30 ರಂದು ಬೆಳಿಗ್ಗೆ ಗಂಟೆ 11 ಕ್ಕೆ ಹಸಿರು ಕಾಣಿಕೆ ಮೆರವಣಿಗೆಯಲ್ಲಿ ದೇವಳಕ್ಕೆ ಸಮರ್ಪಣೆ ಗೊಳ್ಳಲಿದೆ.