ಫೆ.4: ಸುಳ್ಯ ಗಾಂಧಿನಗರ ಕಲ್ಕುಡ ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೋತ್ಸವ

0

ಸುಳ್ಯದ ನಾವೂರು ರಸ್ತೆಯ ಗಾಂಧಿನಗರದ ಕಾರಣಿಕ ಕ್ಷೇತ್ರ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವರ್ಷಂಪ್ರತಿಯಂತೆ ಫೆ.4 ರಂದು ಬೆಳಗ್ಗೆ ಶ್ರೀ ಕಲ್ಕುಡ, ಕಲ್ಲುರ್ಟಿ, ಶ್ರೀ ಗುಳಿಗ ದೈವಗಳ ನೇಮೋತ್ಸವವು ನಡೆಯಲಿರುವುದು. ಪ್ರಾತ:ಕಾಲ ಗಂಟೆ 6.00 ರಿಂದ ದೈವದ ಕೋಲವು ಆರಂಭಗೊಂಡು ಮಧ್ಯಾಹ್ನದವರೆಗೆ ಶ್ರೀ ದೈವಗಳ ನೇಮವು ನಡೆಯಲಿದೆ.

ಭಕ್ತಾದಿಗಳು ಸಲ್ಲಿಸುವ ಹರಕೆಯ ಅಗೇಲು ಸೇವೆಗೆ ಫೆ.3 ರಂದು ಮಧ್ಯಾಹ್ನ 3:00 ಗಂಟೆಯಿಂದ ಫೆ.4 ರ ತನಕ ರಶೀದಿಯನ್ನು ನೀಡಲಾಗುವುದು. ಅಗೇಲು ಸೇವೆಯ ದಿನದಂದು ರಶೀದಿ ನೀಡಲಾಗುವುದಿಲ್ಲ.

ಕಳೆದ ವರ್ಷದಿಂದ ಆಡಳಿತ ಮಂಡಳಿಯ ತೀರ್ಮಾನದಂತೆ ಎರಡು ಬಾರಿ ಅಗೇಲು ಸೇವೆ ನಡೆಯಲಿದ್ದು ಈ ಬಾರಿ ಫೆ. 11 ರಂದು ಮತ್ತು ಮಾರ್ಚ್ 3 ರಂದು ಹರಕೆಯ ಅಗೇಲು ಸೇವೆಯು ನಡೆಯಲಿರುವುದು ಎಂದು ದೈವಸ್ಥಾನದ ಆಡಳಿತ ಧರ್ಮದರ್ಶಿ ಪಿ.ಕೆ ಉಮೇಶ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.