ಗುತ್ತಿಗಾರು ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಮಹಾಸಭೆ

0

ಗುತ್ತಿಗಾರು ಅನ್ಸಾರುಲ್ ಮುಸ್ಲಿಂಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ (A.M.Y.A) ಇದರ 26 ನೇ ವಾರ್ಷಿಕ ಮಹಾಸಭೆ ಜನವರಿ 26 ರಂದು ಮಾದರಸಾ ಸಭಾಂಗಣದಲ್ಲಿ ಜರುಗಿತು.

ಸ್ಥಳೀಯ ಖತೀಬರಾದ ಸುಲೈಮಾನ್ ಸಅದಿ ಕೂರ್ನಡ್ಕರವರ ದುಆ ನೆರವೇರಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ವಹಿಸಿದ್ದರು.ವೇದಿಕೆಯಲ್ಲಿ ಮೊಹದ್ದೀನ್ ಆರಿಸ್ ಸಅದಿ, ಎ ಎಂ ವೈ ಎ ಅಧ್ಯಕ್ಷ ಹಮೀದ್ ಚ್ ಎಂ ಉಪಸ್ಥಿತರಿದ್ದರು.


ಕಳೆದ ಸಾಲಿನ ವರದಿ ಮತ್ತು ಲೆಕ್ಕಪತ್ರವನ್ನು ಕಾರ್ಯದರ್ಶಿ ಮಂಡಿಸಿದರು. ಮುಂದಿನ ದಿನಗಳಲ್ಲಿ ಸಮಿತಿಯ ಕಾರ್ಯ ಚಟುವಟಿಕೆಗಳನ್ನು ಹೆಚ್ಚಿಸುವ ಬಗ್ಗೆ ಚರ್ಚೆಗಳು ನಡೆಯಿತು.


ಬಳಿಕ ನೂತನ ಸಮಿತಿಯನ್ನು ರಚಿಸಿ ಅಧ್ಯಕ್ಷರಾಗಿ ಶಾಹುಲ್ ಹಮೀದ್.ಹೆಚ್.ಎಮ್.ಬಾಕಿಲರರು ಪುನರಾಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ ಕಲಂದರ್ ಬಾಕಿಲ,ಕೋಶಾಧಿಕಾರಿಯಾಗಿ ಮಜೀದ್ ವಳಲಂಬೆ, ಕಾರ್ಯದರ್ಶಿ ಸಮದ್ ಬಿ, ನಿರ್ದೇಶಕಗಳಾಗಿ ಮಜೀದ್, ಹಮೀದ್ ಹೆಚ್ ಎಂ, ಲತೀಫ್ ಬಿ, ಸಾಧಿಕ್ ಜಿ, ನಿಜ್ಜಾಂ ವಿ, ಕಲಂದರ್ ಬಿ, ಆಸಿಫ್, ಶರೀಫ್, ಹಾಗೂ ಸಲಹಾ ಸಮಿತಿಯ ಅಧ್ಯಕ್ಷರಾಗಿ ಜಮಾಅತ್ ಕಥೀಬರು,ಅಧ್ಯಕ್ಷರು, ಹಾಗೂ ಮೈದು ಕುಂಞಿ ಬಾಕಿಲ ಆಯ್ಕೆಯಾದರು.

ಅಬ್ದುಸ್ಸಮದ್ ಬಾಕಿಲರವರು ಸ್ವಾಗತಿಸಿ ಹಾರಿಸ್ ಸಅದಿ ವಂದಿಸಿದರು.