ಜಯನಗರ : ಶ್ರದ್ಧಾ ಭಕ್ತಿಯಿಂದ ಸಮಾಪನಗೊಂಡ 6ನೇ ಅಜ್ಮೀರ್ ವಾರ್ಷಿಕ

0

ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವಸಿ ಅಲ್ಲಾಹನ ಪ್ರೀತಿಗೆ ಪಾತ್ರರಾಗಿ :ಸಯ್ಯಿದ್ ಶಮೀಮ್ ತಂಙಳ್ ಕುಂಬೋಲ್

ಜಯನಗರ ಜನ್ನತುಲ್ ಉಲೂಂ ಮಸ್ಜಿದ್ & ಮದರಸದಲ್ಲಿ ವರ್ಷಂ ಪ್ರತೀ ಆಚರಿಸಿಕೊಂಡು ಬರುತ್ತಿರುವ ಅಜ್ಮೀರ್ ಮೌಲಿದ್ ಕಾರ್ಯಕ್ರಮದ 6ನೇ ವಾರ್ಷಿಕ ಕಾರ್ಯಕ್ರಮ ಹಾಗೂ ಏಕದಿನ ಮತಪ್ರಭಾಷಣ ಜ 28 ರಂದು ಜಯನಗರ ಮಸ್ಜಿದ್ & ಮದರಸ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮದ ದುವಾ ನೇತೃತ್ವವನ್ನು ನೀಡಿದ ಸಯ್ಯದ್ ಶಮೀಮ್ ತಂಙಳ್ ಕುಂಬೋಳ್ ಮಾತನಾಡಿ ಪರಸ್ಪರ ಪ್ರೀತಿ ವಿಶ್ವಾಸದ ಜೀವನದೊಂದಿಗೆ ಅಲ್ಲಾಹನ ಆರಾಧನೆಯನ್ನು ರೂಡಿಸಿಕೊಂಡು ಸರ್ವಶಕ್ತನಾದ ಅಲ್ಲಾಹನ ಪ್ರೀತಿಗೆ ಪಾತ್ರರಾಗಿ ಎಂದು ಹೇಳಿದರು.

ಮುಖ್ಯ ಪ್ರಭಾಷಣ ಕಾರರಾಗಿ ಭಾಗವಹಿಸಿದ್ದ ಕೇರಳದ ಖ್ಯಾತ ವಾಗ್ಮಿ ವಹ್ಹಾಬ್ ನಈಮಿ ಕೊಲ್ಲಂ ಅಜ್ಮೀರ್ ಖಾಜಾ ತಂಙಳ ಆದರ್ಶ ಜೀವನ ಚರಿತ್ರೆಯ ಕುರಿತು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಕುಂಞಿ ಕೋಯಾ ಸಅದಿ ತಂಙಳ್ ಸುಳ್ಯ ನೆರವೇರಿಸಿದರು.
ಮೊಗರ್ಪಣೆ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು.

ಸಂಜೆ ನಡೆದ ಅಜ್ಮೀರ್ ಮೌಲೂದ್ ಕಾರ್ಯಕ್ರಮವನ್ನು ಸೈಯ್ಯಿದ್ ಜೈನುಲ್ ಆಬಿದೀನ್ ತಂಙಳ್ ಜಯನಗರ ನೆರವೇರಿಸಿದರು.

ಸ್ಥಳೀಯ ಮಸೀದಿ, ಮದ್ರಸ ಕಮಿಟಿ ಅಧ್ಯಕ್ಷ ಮಹಮ್ಮದ್ ಮುಟ್ಟೆತ್ತೋಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಮೊಗರ್ಪಣೆ ಎನ್ ಐ ಎಂ ಮದರಸ ಸದರ್ ಮುಅಲ್ಲಿಂ ಅಬ್ದುಲ್ ಕರೀಮ್ ಸಖಾಫಿ, ಶಾಂತಿನಗರ ಮದರಸ ಸದಮಹಲ್ಲಿ ಅಬ್ದುಲ್ ರಶೀದ್ ಝೈನಿ,ಸುಳ್ಯ ನಗರ ಪಂಚಾಯತಿ ಮಾಜಿ ಅಧ್ಯಕ್ಷ ಎಸ್ ಸಂಶುದ್ದಿನ್ ಅರಂಬೂರು, ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ, ಉದ್ಯಮಿ ಹಾಜಿ ಅಬ್ದುಲ್ ರಝಾಕ್ ಶೀತಲ್, ಬಿ ಎಂ ಎ ವೆಜಿಟೇಬಲ್ ಮಾಲಕ ಹಾಜಿ ಅಬೂಬಕ್ಕರ್, ಅಬ್ದುಲ್ ಖಾದರ್, ಹಿರಿಯರಾದ ಡಿ ಇಬ್ರಾಹಿಂ,ಮೊಗರ್ಪಣೆ ದಫ್ ಅಸೋಸಿಯೇಷನ್ ಅಧ್ಯಕ್ಷ ಜಲೀಲ್, ಕೆಎಂಜೆ ಅಧ್ಯಕ್ಷ ಅಬ್ದುಲ್ಲಾ ಹಾಜಿ ಜಯನಗರ, ಬಶೀರ್ ಸಖಾಫಿ ಜಯನಗರ ಮೊದಲಾದವರು ಉಪಸ್ಥಿತರಿದ್ದರು.


ಸ್ಥಳೀಯ ಮದ್ರಸ ಸದರ್ ಮುಅಲ್ಲಿಂ ಶಫೀಕ್ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಪ್ರಧಾನ ಕಾರ್ಯದರ್ಶಿ ಹಸೈನಾರ್ ಜಯನಗರ ವಂದಿಸಿದರು.
ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಸ್ಥಳೀಯ ಯುವಕರು ಸಹಕರಿಸಿದರು.
ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ ಅನ್ನಪ್ರಸಾದವನ್ನು ಸ್ವೀಕರಿಸಿದರು.