ದುರಸ್ತಿಗೆ ತಾತ್ಕಾಲಿಕ ವ್ಯವಸ್ಥೆ ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ ಭರವಸೆ
ಸುಮಾರು ಮೂವತ್ತೈದು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ದೇರಾಜೆ ಕಿಂಡಿ ಅಣೆಕಟ್ಟಿನ ಮೇಲ್ಬಾಗದ ನಡೆದಾಡುವ ಕಾಲುದಾರಿಯ ಸ್ಲಾಬ್ ಮುರಿದು ಬಿದ್ದು, ದಂಪತಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಜ.25ರಂದು ಸಂಭವಿಸಿದೆ.
ದೇರಾಜೆಯ ಚಂದ್ರಪ್ರಕಾಶ್ ಮತ್ತು ಅವರ ಪತ್ನಿ ವೇದಾವತಿ ಅವರು ತಮ್ಮದೇ ಕೃಷಿಭೂಮಿ ಹೊಂದಿರುವ ಜಾಗದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿ ಬರುತ್ತಿರುವ ವೇಳೆ ಕಿಂಡಿ ಅಣೆಕಟ್ಟುವಿನ ಮೇಲ್ಬಾಗದ ಸ್ಲಾಬ್ ತುಂಡಾಗಿ ಬಿದ್ದ ಪರಿಣಾಮವಾಗಿ ಚಂದ್ರಪ್ರಕಾಶ್ ಅವರಿಗೆ ತಲೆಗೆ ಹಾಗೂ ಅವರ ಪತ್ನಿ ವೇದಾವತಿ ಅವರ ಎಡ ಕಾಲಿಗೆ ಗಾಯಗೊಂಡಿದ್ದು, ಅವರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ
.
ಈ ಬಗ್ಗೆ ‘ಸುದ್ದಿ’ಗೆ ಪ್ರತಿಕ್ರಿಯೆ ನೀಡಿರುವ ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ ಅವರು ದೇರಾಜೆಯ ಸೇತುವೆ ವ್ಯಾಪ್ತಿಯ ಐವತ್ತು ಮೀಟರ್ ದೂರದಲ್ಲಿ ಆಚಾರಿಕೊಟ್ಟಿಗೆ ಸಂಪರ್ಕ ಸೇತುವೆ ವ್ಯವಸ್ಥೆಯಿದ್ದು, ಅಗತ್ಯ ಕಂಡು ಬಂದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಮುರಿದು ಬಿದ್ದಿರುವ ಕಿಂಡಿ ಅಣೆಕಟ್ಟನ್ನು ತಾತ್ಕಾಲಿಕವಾಗಿ ದುರಸ್ತಿ ಕೆಲಸ ಮಾಡಿಸುವುದಾಗಿ ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ ಅವರು ಭರವಸೆ ನೀಡಿದ್ದಾರೆ.