ಸುಳ್ಯದ ಸ್ನೇಹ ಶಾಲೆಯಿಂದ ವಿಜ್ಞಾನ ವಿಷಯದಲ್ಲಿ vitual ಪಡೆಯುತ್ತಿರುವ ಮಡಿಕೇರಿ ತಾಲ್ಲೂಕಿನ ಗಡಿ ಭಾಗದ ಕರಿಕೆಯ ಪ್ರೌಢ ಶಾಲಾ ಮಕ್ಕಳು ಫೆ.1ರಂದು ಸ್ನೇಹ ಶಾಲೆಗೆ ಭೇಟಿ ನೀಡಿದರು.
ಮಾದರಿ ಶಾಲೆಯೊಂದಕ್ಕೆ ಭೇಟಿ ನೀಡುವ ಕಾರ್ಯಕ್ರಮದ ಅಡಿಯಲ್ಲಿ ಈ ಪ್ರವಾಸವನ್ನು ಹಮ್ಮಿಕೊಂಡಿದ್ದರು.
ಶಾಲಾ ಶಿಕ್ಷಕ ವರ್ಗ ಮತ್ತು ಶಾಲಾಭಿವೃದ್ಧಿ ಮಂಡಳಿಯ ಸದಸ್ಯರೊಡನೆ 60 ಮಂದಿ ವಿದ್ಯಾರ್ಥಿಗಳು ಬಂದು ಶಾಲೆಯ ಸೌಂದರ್ಯ
ತುಂಬಿದ ಪರಿಸರದಲ್ಲಿ ಸೂರ್ಯಾಲಯ, ಕಲಾಶಾಲೆ, ಬರಹದ ಮನೆ, ಗುರುಕುಲ, ಬಯಲು ರಂಗಮಂದಿರ, ವೃತ್ತಾಕಾರದ ಕೊಠಡಿಗಳನ್ನು ನೋಡಿ ವಿಸ್ಮಿತರಾದರು. ಕರಿಕೆ ಶಾಲೆಯ ವಿದ್ಯಾರ್ಥಿಗಳೊಡನೆ ನಮ್ಮ ಶಾಲಾ ವಿದ್ಯಾರ್ಥಿಗಳು ಅಭ್ಯಾಸ ವಿಧಾನಗಳ ವಿಮರ್ಶೆ ಮಾಡಿದ್ದು ತುಂಬಾ ಉಪಯುಕ್ತವಾಯಿತು.