ಪಂಜ ಸೀಮೆ ದೇವಳದಲ್ಲಿ ವರ್ಷಾವಧಿ ಜಾತ್ರೋತ್ಸವಕ್ಕೆ ಧ್ವಜಾರೋಹಣ

0

ಫೆ.5: ಹಗಲು ದರ್ಶನ ಬಲಿ,


ಫೆ.6: ರಾತ್ರಿ ಬ್ರಹ್ಮರಥೋತ್ಸವ

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಯವರ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯ ಕ್ರಮಗಳೊಂದಿಗೆ ಜ.24 ರಿಂದ ಫೆ.9 ರ ತನಕ ವಿಜೃಂಭಣೆಯಿಂದ ನಡೆಯಲಿದೆ.

ಫೆ.1 ರಂದು ಸಂಜೆ ತಂತ್ರಿ ಆಗಮನ, ಧ್ವಜಾರೋಹಣ ನಡೆದು ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು ದೇವಳದ ಆಡಳಿತಾಧಿಕಾರಿ , ತಹಶೀಲ್ದಾರ್ ಜಿ.ಮಂಜುನಾಥ, ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಉಪತಹಶೀಲ್ದಾರ್ ಚಂದ್ರಕಾಂತ್ ಎಮ್ ಆರ್,ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ಉತ್ಸವ ಸಮಿತಿ ಸದಸ್ಯರಾದ

ಮಹೇಶ್ ಕುಮಾರ್ ಕರಿಕ್ಕಳ,ರಜಿತ್ ಭಟ್ ಪಂಜಬೀಡು, ಬಾಲಕೃಷ್ಣ ಗೌಡ ಕುದ್ವ,ಸಂತೋಷ್ ರೈ ಪಲ್ಲತ್ತಡ್ಕ, ಕೇಶವ ಕುದ್ವ, ಸತ್ಯನಾರಾಯಣ ಭಟ್ ಕಾಯಂಬಾಡಿ, ತಿಮ್ಮಪ್ಪ ಗೌಡ ಪುತ್ಯ, ಧರ್ಮಪಾಲ ಗೌಡ ಮರಕಡ ಕಾಚಿಲ, ತಿಮ್ಮಪ್ಪ ಗೌಡ ಪುತ್ಯ, ಮಾಯಿಲಪ್ಪ ಗೌಡ ಎಣ್ಮೂರು, ಶರತ್ ಕುದ್ವ, ಮಹಾಲಿಂಗ ಸಂಪ, ಜಗದೀಶ್ ಮಠ, ಕುಮಾರ ಕಕ್ಯಾನ, ಶ್ರೀಮತಿ ಪವಿತ್ರ ಕುದ್ವ ಮಲ್ಲೆಟಿ, ಧರ್ಮಣ್ಣ ನಾಯ್ಕ ಗರಡಿ, ಪವನ್ ಪಲ್ಲತ್ತಡ್ಕ, ಕುಶಾಲಪ್ಪ ಗೌಡ ದೊಡ್ಡಮನೆ, ವಿವಿಧ ಸಮಿತಿಗಳ ಸಂಚಾಲಕರು,ಸದಸ್ಯರು,
ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರುಗಳು,ಸದಸ್ಯರು. ಸಲಹಾ ಸಮಿತಿ ಮಾಜಿ ಸದಸ್ಯರು,
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ , ಗ್ರಾಮ ಪಂಚಾಯತ್ ಸದಸ್ಯರು, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ನಿರ್ದೇಶಕರು,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುವರ್ಣಿನಿ ಎನ್ ಎಸ್,ಮೊದಲಾದ ಗಣ್ಯರು,
ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

ಶ್ರೀ ಕ್ಷೇತ್ರಕ್ಕೆ ತಂತ್ರಿಗಳ ಆಗಮನ : ಸಂಜೆ ಶ್ರೀ ಕ್ಷೇತ್ರಕ್ಕೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಆಗಮಿಸಿದ್ದು ಅವರನ್ನು ಬ್ಯಾಂಡ್ ಬ್ಯಾಂಡ್- ವಾಲಗ,ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.ದೇವಳದಲ್ಲಿ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಜರುಗಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷ ಮಿತ್ರರು ಪಂಜ ಇದರ ಆಶ್ರಯದಲ್ಲಿ ಸಸಿ ಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಮಂಗಳೂರು ಇವರಿಂದ ಮುಗುರು ಮಲ್ಲಿಗೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.

ಫೆ.2 ರಂದು ಮುಂಜಾನೆ ನಾಗತೀರ್ಥ ಮೂಲಸ್ಥಾನ ಬಂಟಮಲೆಯಿಂದ ಶ್ರೀ ದೇವಾಲಯಕ್ಕೆ ತೀರ್ಥ ತರುವುದು.ಮಹಾ ಪೂಜೆ, ನಿತ್ಯಬಲಿ.
ನಡೆಯಲಿದೆ.

ಫೆ.3.ರಂದು ಮಹಾಪೂಜೆ , ನಿತ್ಯಬಲಿ ಸಂಜೆ ಹಸಿರು ಕಾಣಿಕೆ ಮೆರವಣಿಗೆ ಪುತ್ಯ ಕಟ್ಟೆಯಿಂದ ಆರಂಭ ಗೊಂಡು ದೇವಳಕ್ಕೆ ಸಮರ್ಪಣೆ ಗೊಳ್ಳಲಿದೆ.ದಂಡಮಾಲೆ ಹಾಕಿ ಬಲಿ , ಬೇತಾಳಗಳು ಇಳಿಯುವುದು.ಫೆ4. ರಂದು ಶ್ರೀ ದೇವರ ಉತ್ಸವ, ಮಹಾ ಪೂಜೆ.ಫೆ.5 ರಂದು ಹಗಲು ಶ್ರೀ ದೇವರ ದರ್ಶನ ಬಲಿ.ಫೆ.6.ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವವು ಜರುಗಲಿದೆ.

ಫೆ.7.ರಂದು ಕವಾಟೋದ್ಜಾಟನೆ ದೇವರಿಗೆ ಅಭಿಷೇಕ ,ಬಲಿ ಹೊರಟು ಅವಭೃತ ಸ್ನಾನ ,ಧ್ವಜಾವರೋಹಣ , ಮಹಾಪೂಜೆ ಜರುಗಲಿದೆ.ಸಂಜೆ ದೇಗುಲದಿಂದ ಶ್ರೀ ಕಾಚುಕುಜುಂಬ, ಉಳ್ಳಾಕುಲು ದೈವಗಳ ಭಂಡಾರ ವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿ ಬೈಲಿಗೆ ಹೋಗಿ ಧ್ವಜಾರೋಹಣ , ಶ್ರೀ ಕಾಚುಕುಜುಂಬ ದೈವದ ನೇಮ. ಫೆ.8 ರಂದು ಮುಂಜಾನೆ ಗರಡಿ ಬೈಲಿನ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ ಹಾಗೂ ಶ್ರೀ ಉಳ್ಳಾಕುಲು ದೈವದ ನೇಮ ,ಪ್ರಸಾದ ವಿತರಣೆ , ಧ್ವಜಾವರೋಹಣ, ಶ್ರೀ ದೇವಳದಲ್ಲಿ ಸಂಪ್ರೋಕ್ಷಣೆ ,ಮಹಾಪೂಜೆ ವೈದಿಕ ಮಂತ್ರಾಕ್ಷತೆ ಪ್ರಸಾದ ವಿತರಣೆ ಜರುಗಲಿದೆ. ರಾತ್ರಿ ಶಿರಾಡಿ ದೈವದ ಬಂಡಾರ ಬರುವುದು.ಫೆ.9.ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ ಜರುಗಲಿದೆ

ವಿಶೇಷ ಆಕರ್ಷಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು:
ಫೆ .3.ಹಸಿರು ಕಾಣಿಕೆ ಮೆರವಣಿಗೆಯಲ್ಲಿ ಮತ್ತು ಫೆ.6. ರಾತ್ರಿ ಬ್ರಹ್ಮ ರಥೋತ್ಸವದ ವೇಳೆ ರಾಜ್ಯ ಪ್ರಶಸ್ತಿ ವಿಜೇತ ರಮೇಶ್ ಕಲ್ಲಡ್ಕ ರವರ ಶಿಲ್ಪ ಗೊಂಬೆ ಬಳಗದಿಂದ ಕೀಲು ಕುದುರೆ , ಕರಗೃತ್ಯ,ಗೊಂಬೆಯಾಟ ವಿಶೇಷ ಆಕರ್ಷಣೆಯಾಗಲಿದೆ.

ಫೆ.2 ರಂದು ರಾತ್ರಿ ಗಂಟೆ 7 ರಿಂದ ಪ್ರಣತಿ ಚೈತನ್ಯ ಪದ್ಯಾನ ಮತ್ತು ಪದಯಾನ ತಂಡದವರಿಂದ ಭರತನಾಟ್ಯ ಪ್ರದರ್ಶನ ಗೊಳ್ಳಲಿದೆ.

ಜ.3 ರಂದು ರಾತ್ರಿ ಗಂಟೆ 7 ರಿಂದ ಡಾನ್ಸ್ & ಬೀಟ್ಸ್ ಪಂಜ ಮತ್ತು ಬೆಳ್ಳಾರೆ ಇದರ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ಪ್ರದರ್ಶನ ಗೊಳ್ಳಲಿದೆ.

ಫೆ.5 ರಂದು ರಾತ್ರಿ ಗಂಟೆ 7 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ರವರಿಂದ ಕಾರುಣ್ಯಾಂಬುಧಿ ಶ್ರೀ ರಾಮ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ.