ತಮಿಳುನಾಡು ರಾಜ್ಯದ ಎಂ.ಜಿ.ಆರ್. ಮೆಡಿಕಲ್ ಯುನಿವರ್ಸಿಟಿಯವರು ನಡೆಸಿದ ಡಿ.ಎಂ. ಗ್ಯಾಸ್ಟ್ರೋ ಎಂಟರೋಲಾಜಿ ಮೆಡಿಸಿನ್ ಪರೀಕ್ಷೆಯಲ್ಲಿ, ತಮಿಳುನಾಡಿನ ತೂತುಕುಡಿ ಜಿಲ್ಲಾ ಸರಕಾರಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಡಾ. ಶಿರೀಶ್ ರೈಯವರು ಉತ್ತೀರ್ಣರಾಗಿದ್ದಾರೆ.
ಮೂಲತಃ ಸುಳ್ಯ ಕಸಬಾ ನಾವೂರಿನವರಾಗಿರುವ ಇವರು, ಪ್ರಸ್ತುತ ಪೆರ್ಲಂಪಾಡಿಯಲ್ಲಿ ನೆಲೆಸಿರುವ ಕೆಎಫ್‌ಡಿಸಿ ನಿವೃತ್ತ ಅಧಿಕಾರಿ ದಯಾಕರ ರೈ ಹಾಗೂ ಶ್ರೀಮತಿ ಜಯಲಕ್ಸ್ಮಿ ರೈ ದಂಪತಿಗಳ ಪುತ್ರನಾಗಿರುವ ಡಾ. ಶಿರೀಶ್ ರೈಯವರು ತನ್ನ ಎಂಬಿಬಿಎಸ್ ಪದವಿಯನ್ನು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಪೂರೈಸಿ ಜೈಪುರದ ಎಸ್‌ಎಂಎಸ್ ಕಾಲೇಜಿನಲ್ಲಿ ಎಂ.ಡಿ. ಪದವಿ ಪಡೆದಿದ್ದರು.
ಇವರು ಸುಳ್ಯ ರೋಟರಿ ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿ.