ಫೆ.6ರಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33 ಕೆ.ವಿ ಮಾಡಾವು-ಬೆಳ್ಳಾರೆ. 33ಕೆ.ವಿ ಗುತ್ತಿಗಾರು ವಿದ್ಯುತ್ ಮಾರ್ಗಗಳಲ್ಲಿ ಮತ್ತು 11 ಕೆ.ವಿ ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, 110/33ಕೆ.ವಿ ಮಾಡಾವು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 33 ಕೆ.ವಿ ಮಾಡಾವು-ಬೆಳ್ಳಾರೆ, ಹಾಗೂ 33/11ಕೆ.ವಿ ಗುತ್ತಿಗಾರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 33ಕೆ.ವಿ ಗುತ್ತಿಗಾರು ಮತ್ತು 33/11 ಕೆ.ವಿ ಬೆಳ್ಳಾರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11ಕೆವಿ ಬೆಳ್ಳಾರೆ-1, ಬೆಳ್ಳಾರೆ-2, ನೆಟ್ಟಾರು, ಕಳಂಜ, ಮುರುಳ್ಯ, ಪೆರ್ಲಂಪಾಡಿ, ಚೊಕ್ಕಾಡಿ ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 06:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.