ಸುಬ್ರಹ್ಮಣ್ಯದಲ್ಲಿ ನಾಳೆ (ಫೆ.6 )ರಂದು ವೃತ್ತಿಪರ ಮಾರ್ಗದರ್ಶನ ತರಬೇತಿ ಶಿಬಿರ

0

ಜೇಸಿಐ ಪಂಜ ಪಂಚಶ್ರೀ ಮತ್ತು ಮುಡೂರು ಇನ್ಫೋಟೆಕ್ ಪಂಜ ಇವರ ಜಂಟಿ ಆಶ್ರಯದಲ್ಲಿ ದಿಕ್ಸೂಚಿ ಎಂಬ ವೃತ್ತಿಪರ ಮಾರ್ಗದರ್ಶನ ತರಬೇತಿ ಶಿಬಿರವು ಫೆ.6 ರಂದು ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಜೇಸಿಐ ಪೂರ್ವ ವಲಯ್ಯಾಧ್ಯಕ್ಷ ಜೇಸಿ ಚಂದ್ರಶೇಖರ್ ನಾಯರ್ ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ನಾಯಕ ಭಾಗವಹಿಸಲಿದ್ದಾರೆ.

ತರಬೇತುದಾರರಾಗಿ ಜೇಸಿ ರಾಜೇಶ್ ಬೆಜ್ಜಂಗಳ ರವರು ಆಗಮಿಸಿ ತರಬೇತಿ ಶಿಬಿರ ನಡೆಸಿಕೊಡಲಿದ್ದಾರೆ.