ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆ

0

ನಾಲ್ಕೂರು ಗ್ರಾಮದ ಕಡವೆಗುಂಡಿ ಎಂಬಲ್ಲಿ ಮನುದೇವ್ ಪರಮಲೆಯವರು ಮಾಡಿದ ಕೃಷಿಯನ್ನು, ದ.ಕ.ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ದಿನ ಕೆಲವರು ಸರಕಾರಿ ಜಾಗ ಅತಿಕ್ರಮಣವೆಂದು ಪ್ರತಿಪಾದಿಸಿ ದೂರು ನೀಡಿದ್ದರಿಂದ ಜಿಲ್ಲಾಧಿಕಾರಿಗಳು ತೆರವಿಗೆ ಅದೇಶಿಸಿದ್ದರು. ಬಳಿಕ ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದರು.

ಇದರ ವಿರುದ್ಧ ಮನುದೇವರು ಹೈಕೋರ್ಟ್ ಮೆಟ್ಟಲೇರಿದ್ದರು. ಹೈಕೋರ್ಟು ಜಿಲ್ಲಾಧಿಕಾರಿಯವರ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಮುಟ್ಟುಗೋಲು ಮಾಡಿಕೊಂಡ ಎಲ್ಲಾ ವಸ್ತುಗಳನ್ನು ಹಿಂತಿರುಗಿಸಲು ಆದೇಶ ನೀಡಿದೆ.

ಅದರಂತೆ ಸುಳ್ಯ ತಾಲೂಕು ಕಛೇರಿಯಲ್ಲಿದ್ದ ಸೋಲಾರ್ ಬೇಲಿ,ಬ್ಯಾಟರಿ ಮತ್ತು ಇತರ ವಸ್ತುಗಳನ್ನು ಇಲಾಖೆ ಮನುದೇವರಿಗೆ ಹಿಂತಿರುಗಿಸಿದೆ ಎಂದು ತಿಳಿದುಬಂದಿದೆ. ಈ ವೇಳೆ ನಾಲ್ಕೂರು ಗ್ರಾಮ ಲೆಕ್ಕಾಧಿಕಾರಿ ಶ್ರೀಕಲಾ ಉಪಸ್ಥಿತರಿದ್ದರು.