ಅರಿವು ಕೃಷಿ ಕೇಂದ್ರದ ವತಿಯಿಂದ ನಡೆಯುವ ಉದ್ಯೋಗ ಆಕಾಂಕ್ಷೆಗಳಿಗೆ ಮತ್ತು ಸ್ವಂತ ಉದ್ಯಮ ಮಾಡುವವರಿಗೆ ಉದ್ಯಮಶೀಲತೆ, ಅಭಿವೃದ್ಧಿ ವಿಶೇಷ ಮಾಹಿತಿ ಕಾರ್ಯಾಗಾರವು ನಾಳೆ (ಅ.21) ರಂದು ಸುಳ್ಯದ ಶ್ರೀಹರಿ ಬಿಲ್ಡಿಂಗ್‌ನಲ್ಲಿರುವ ರಂಗಮಯೂರಿ ಕಲಾಶಾಲೆಯಲ್ಲಿ ನಡೆಯಲಿರುವುದು.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಯೋಜನೆಯ ದ.ಕ. ಜಿಲ್ಲೆಯ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು ಮಾಹಿತಿ ಕಾರ್ಯಾಗಾರ ನಡೆಸಲಿದ್ದಾರೆ.
ಉದ್ಯಮ ಪ್ರಾರಂಭಿಸುವಲ್ಲಿಂದ ಹಿಡಿದು ಯಂತ್ರೋಪಕರಣಗಳು, ಸಾಲ, ಸಬ್ಸಿಡಿ ಮತ್ತು ಮಾರುಕಟ್ಟೆಯವರೆಗಿನ ಮಾಹಿತಿ ಕಾರ್ಯಾಗಾರ ನಡೆಯಲಿರುವುದು.
ನಾಳೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಯಾಗಾರ ನಡೆಯಲಿದ್ದು, ಅಪರಾಹ್ನ 2 ರಿಂದ 4 ಗಂಟೆಯವರೆಗೆ ಪ್ರತಿಯೊಬ್ಬರ ದಾಖಲಾತಿ ಜೋಡಣೆ ಮತ್ತು ಉದ್ಯಮ ಪ್ರಾರಂಭಿಸಲು ಬೇಕಾದ ಅಂತಿಮ ಯೋಜನೆ ತಯಾರಿ ಬಗ್ಗೆ ಪ್ರಾತ್ಯಕ್ಷಿತೆ ನಡೆಯಲಿದೆ.