ನೆಕ್ರಾಜೆ ಗುಡ್ಡಪ್ಪ ಗೌಡ ಸ್ಮರಣಾರ್ಥ ಪುತ್ರಿ ಪುಷ್ಪಾವತಿ ವೆಂಕಟೇಶ್ ರವರಿಂದ ಸೋಣಂಗೇರಿ ಶಾಲೆಗೆ ಲೇಖನ ಸಾಮಾಗ್ರಿ ಕೊಡುಗೆ

0

ಹಿರಿಯ ಧಾರ್ಮಿಕ, ಸಾಮಾಜಿಕ ಮುಖಂಡ, ಪ್ರಗತಿಪರ ಕೃಷಿಕ ನೆಕ್ರಾಜೆ ಗುಡ್ಡಪ್ಪ ಗೌಡರ ಪುಣ್ಯಸ್ಮರಣೆಯ ಅಂಗವಾಗಿ ಅವರ ಪುತ್ರಿ ಶ್ರೀಮತಿ ಪುಷ್ಪಾವತಿಯವರು ಸೋಣಂಗೇರಿ ಸ.ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿಗಳನ್ನು ನೀಡಿದರು.

ನೆಕ್ರಾಜೆ ಗುಡ್ಡಪ್ಪ ಗೌಡರ ಅಳಿಯ ರೈಲ್ವೆ ಇಲಾಖೆಯ ನಿವೃತ್ತ ಸ್ಟೇಷನ್ ಮ್ಯಾನೇಜರ್ ವೆಂಕಟೇಶ್, ಮೊಮ್ಮಗಳಾದ ಶ್ರೀಮತಿ ಪ್ರತಿಮಾ ಅರುಣ್ ಮಡ್ತಿಲ, ಮೊಮ್ಮಗ ಅರುಣ್ ಮಡ್ತಿಲ, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.