ಸುಳ್ಯ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ‌ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ

0

ಸುಳ್ಯದ ಶ್ರೀ ಶಾರದಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭ ದ.ಕ ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯರವರ ಅಧ್ಯಕ್ಷತೆಯಲ್ಲಿ ನಡೆಯಿತು.

ದ.ಕ. ಗೌಡ ವಿದ್ಯಾಸಂಘದ ನಿರ್ದೇಶಕರಾದ ಡಾ. ಸಾಯಿ ಗೀತಾ ಜ್ನಾನೇಶ್ ರವರು ಅತಿಥಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕ ವೃಂದದವರು ಮಾತನಾಡಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರು ತಮ್ಮ ಎರಡು ವರ್ಷದ ಅನುಭವ ಹಂಚಿಕೊಂಡು ಕಾಲೇಜಿಗೆ ಕಿರು ಕಾಣಿಕೆಯನ್ನು ಅರ್ಪಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ದಯಾಮಣಿ.ಕೆ ಮತ್ತು ಮುಖ್ಯೋಪಾಧ್ಯಾಯನಿ ಶ್ರೀಮತಿ ಭಾರತಿ.ಪಿ ರವರು ಮಾತನಾಡಿದರು. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಹಲಾ ಸ್ವಾಗತಿಸಿ, ಭಾಗ್ಯಶ್ರೀ ಕೆ.ಡಿ. ವಂದಿಸಿದರು. ಕುಮಾರಿ ಸೋನಾ ಕಾರ್ಯಕ್ರಮ ನಿರೂಪಿಸಿದರು.