ಮಧುಚಂದ್ರ ಕಳಂಜ ಸ್ವೀಡನ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

0

ವೆಟರನ್ಸ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡಿನ ತಿರುನಲ್ವೇಲಿಯ ಅಣ್ಣಾ ಸ್ಟೇಡಿಯಂನಲ್ಲಿ ಫೆ. 2 ರಿಂದ 4ರವರೆಗೆ ನಡೆದ 43ನೇ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟದ 35 ವಯೋಮಾನ ವಿಭಾಗದಲ್ಲಿ ಕಳಂಜ ಗ್ರಾಮದ ಮಧುಚಂದ್ರ ಭಾಗವಹಿಸಿ ಹಲವು‌ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.

100 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ ಸುತ್ತಿಗೆ ಎಸೆತದಲ್ಲಿ ತೃತೀಯ, 4×100 ಮೀ ರಿಲೇ ಮತ್ತು 4×400 ಮೀ ರಿಲೇಯಲ್ಲಿ ದ್ವಿತೀಯ ಹಾಗೂ 4×100 ಮಿಕ್ಸ್ ಡ್ ರಿಲೇ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಸ್ವೀಡನ್ ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.