ಪಂಬೆತ್ತಾಡಿ ಗ್ರಾಮದ ಮಂಚಿಕಟ್ಟೆಯ ಕ್ವಾಂಟ್ರಸ್ನಲ್ಲಿ ನೆಲೆಸಿರುವ ಕುಸುಮಾ (45) ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದು, ಕಳೆದ 5 ವರ್ಷಗಳಿಂದ ಈ ಸಮಸ್ಯೆಯಿಂದ ತತ್ತರಿಸಿಹೋಗಿದ್ದಾರೆ.
ಕಡು ಬಡತನದಲ್ಲಿಯೂ ಕಷ್ಟ ಪಟ್ಟು ಜೀವ ನಡೆಸಿ, ಈ ಪ್ರಾಯದಲ್ಲಿ ಮಗ, ಮಗಳು , ಮೊಮ್ಮಕ್ಕಳೊಂದಿಗೆ ಖುಷಿಯಿಂದ ಜೀವನ ಸಾಗಿಸಬೇಕು ಎನ್ನುವ ಕನಸ್ಸುನ್ನು ಕಂಡ ಈ ಮಹಿಳೆಯ ವಿಧಿಯಾಟವೇ ಬೇರೇ ಆಗಿದೆ.
45 ವರ್ಷದಲ್ಲೇ ಎರಡು ಕಿಡ್ನಿಗಳನ್ನು ಕಳೆದುಕೊಂಡು ಡಯಾಲಿಸಿಸ್ ಮೂಲಕ ಈ ಮಹಿಳೆ ಸಾವನ್ನು ಮುಂದೂಡುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಸಾಕಷ್ಟು ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಿದ್ದು, ಮನೆಯವರು ನೆರವಿಗಾಗಿ ದಾನಿಗಳ ಅಂಗಲಾಚುತ್ತಿದ್ದಾರೆ.
ಕುಸುಮಾರವರಿಗೆ ಮಂಚಿಕಟ್ಟೆಯ ಕ್ವಾಂಟ್ರಸ್ನಲ್ಲಿ 3ಸೆನ್ಸ್ ಜಾಗ ಮಾತ್ರವಿದ್ದು, ಸಣ್ಣದಾದ ಮನೆ ನಿರ್ಮಿಸಿಕೊಂಡಿದ್ದಾರೆ. ಕೈ ಹಿಡಿದ ಗಂಡ ವಿಪರೀತ ಕುಡಿತದ ಚಟ ಹೊಂದಿದ್ದು, ಇತ್ತೀಚೆಗೆ ಪತ್ನಿಯನ್ನು ಬಿಟ್ಟು ಹೋಗಿದ್ದಾರೆ.
ಮನೆಯಲ್ಲಿ ಮಗ ಹಾಗೂ ತಾಯಿ ಮಾತ್ರವಿದ್ದು, ಮಗಳನ್ನು ವಿವಾಹ ಮಾಡಿ ಕೊಡಲಾಗಿದೆ. ಕಡು ಬಡತನವಿದ್ದರೂ ಕೂಲಿ ನಾಲಿ ಮಾಡಿ ಮಗ ವಾರಕ್ಕೆ ಮೂರು ಸಲ ಡಯಾಲಿಸಿಸ್ ಮಾಡಿಸಲು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ. ಡಯಾಲೀಸಿಸ್ ಸರಕಾರಿ ಅಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುತ್ತಿದ್ದು, ಬೇರೆ ಚಿಕಿತ್ಸೆಗೆ ಕೆವಿಜಿಗೆ ಹೋಗಬೇಕಾಗಿದೆ. ಮನೆಯಲ್ಲಿ ಮಗ ಮಾತ್ರ ದುಡಿಯುತ್ತಿರಯವ ಕಾರಣ 3 ದಿನ ಆಸ್ಪತ್ರೆಗೆ ಕರೆದುಕೊಂಡು ಬಂದರೆ, ಮತ್ತೆ ಉಳಿದ ದಿನಗಳಲ್ಲಿ ಮಗ ಕೆಲಸಕ್ಕೆ ಹೋಗಿ ಮನೆಗೆ ನಿರ್ವಹಣೆ ಹಾಗೂ ಆಸ್ಪತ್ರೆಗೆ ಹಣ ಹೊಂದಿಸಬೇಕಾಗಿದೆ.
ಕಳೆದ 5ವರ್ಷದಿಂದ ಇಲ್ಲಿಯವರೆಗೂ ಡಯಾಲಿಸಸ್ ಹಾಗೂ ಆಸ್ಪತ್ರೆಗೆ ತೋರಿಸಲು 3 ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ. ಆದರೇ ಈಗ ಆಪರೇಶನ್, ಔಷಧಿ ಅಥವಾ ವೈದ್ಯರ ಸಲಹೆಯಂತೆ ಕಿಡ್ನ ಕಸಿ ಮಾಡಲು ಹಣ ಹೊಂದಿಸಲಾಗದೆ ಇಡೀ ಕುಟುಂಬ ಕೈ ಕಟ್ಟಿ ಕುಳಿತುಕೊಂಡಿದೆ. ಈ ಹಿನ್ನೆಲೆ ದಾನಿಗಳ ಸಹಾಯ ಹಸ್ತಕ್ತಾಗಿ ಕುಟುಂಬ ಅಂಗಾಲಾಚುತ್ತಿದ್ದು, ಸಹಾಯ ಮಾಡುವವರು A/c Name: Kusuma, M. A/c No: 01782200052798, Canara Bank , IFSC CODE: CNRB0010178, Branch: panja ಹಣ ಸಂದಾಯ ಮಾಡಬಹುದು.