ವೆಂಕಟ್ ವಳಲಂಬೆ ಅಧ್ಯಕ್ಷತೆಯಲ್ಲಿ ಬಿ.ಜೆ.ಪಿ. ಕಚೇರಿಯಲ್ಲಿ ಇಂದು ಬಿ.ಜೆ.ಪಿ. ಗ್ರಾಮ ಚಲೋ ಪೂರ್ವಭಾವಿ ಸಭೆ

0

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿರುವ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ಮೂರು ದಿನ ” ಗ್ರಾಮ ಚಲೋ” ಅಭಿಯಾನ ನಡೆಯಲಿದ್ದು, ಇದರ ಬಗ್ಗೆ ಚರ್ಚಿಸಿ, ಕಾರ್ಯಕ್ರಮ ಅಂತಿಮಗೊಳಿಸುವುದಕ್ಕಾಗಿ ಸುಳ್ಯ ಬಿ.ಜೆ.ಪಿ. ಕಚೇರಿಯಲ್ಲಿ ಇಂದು ಕಾರ್ಯರ್ತರ ಸಭೆ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ವೆಂಕಟ್ ವಳಲಂಬೆ ವಹಿಸಲಿದ್ದಾರೆಂದು ತಿಳಿದುಬಂದಿದೆ.

ಗ್ರಾಮ ಚಲೋ, ಗೋಡೆ ಬರಹ ಮೊದಲಾದ ಕಾರ್ಯಕ್ರಮ ಗಳನ್ನು ಅನುಷ್ಟಾನಗೊಳಿಸುವುದಕ್ಕಾಗಿ ಕೆಲವು ವಾರಗಳ ಹಿಂದೆ ವೆಂಕಟ್ ವಳಲಂಬೆಯವರ ಸಂಚಾಲಕತ್ವದಲ್ಲಿ ಸಮಿತಿ ರಚಿಸಲಾಗಿತ್ತು. ರಾಕೇಶ್ ರೈ ಕೆಡೆಂಜಿ ಮತ್ತು ವಿನಯ ಕುಮಾರ್ ಕಂದಡ್ಕ ಈ ಸಮಿತಿಗೆ ಸಹಸಂಚಾಲಕರಾಗಿ ನೇಮಕಗೊಂಡಿದ್ದರು. ಕಳೆದ ವಾರವಷ್ಟೇ ವೆಂಕಟ್ ವಳಲಂಬೆ ಬಿ.ಜೆ.ಪಿ.ಯ ಸುಳ್ಯ ಮಂಡಲ ಅಧ್ಯಕ್ಷರಾಗಿದ್ದರು. ಆದರೆ ಈ ನೇಮಕದ ಬಗ್ಗೆ ಅಸಮಾಧಾನ ವ್ಯಕ್ತವಾಗಿ ಪಕ್ಷದ ಕಚೇರಿಗೆ ಬೀಗ ಹಾಕಿದ ಘಟನೆ ನಡೆದಿತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷ ಸತೀಶ್ ಕುಂಪಲರವರು ಸುಳ್ಯಕ್ಕೆ ಬಂದು ಪಕ್ಷ ಕಚೇರಿಯಲ್ಲಿ ಮಾತುಕತೆ ನಡೆಸಿದರೂ ಸಮಸ್ಯೆ ಪರಿಹಾರವಾಗದೆ, ರಾಜ್ಯಾಧ್ಯಕ್ಷರಿಗೆ ವಿಷಯ ತಲುಪುವ ಹಂತದಲ್ಲಿದೆ.
ಮಂಡಲಾಧ್ಯಕ್ಷರಾಗಿ ನೇಮಕಗೊಂಡಿರುವ ವೆಂಕಟ್ ವಳಲಂಬೆಯವರಿಗೆ ಮುಂದೆ ಸಾಗಿ ಕೆಲಸ ಮಾಡುವಂತೆ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಅವರು ಗ್ರಾಮ ಚಲೋ ಕಾರ್ಯಕ್ರಮದ ಸಿದ್ಧತೆಗಾಗಿ ಚರ್ಚೆಗಾಗಿ ಇಂದು ಸಭೆ ಕರೆದಿದ್ದಾರೆ. ಗ್ರಾಮ ಚಲೋ ಜಿಲ್ಲಾ ಸಂಚಾಲಕ ಯತೀಶ್ ಆರ್ವಾರ ಸಭೆಯಲ್ಲಿ ಭಾಗವಹಿಸಲಿರುವರೆಂದು ತಿಳಿದುಬಂದಿದೆ.