ಕಾಣಿಯೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ಸುಬ್ರಹ್ಮಣ್ಯದ ರಘು ಎನ್.ಬಿ

0

ಕಾಣಿಯೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ಸುಬ್ರಹ್ಮಣ್ಯದ ರಘು
ಎನ್.ಬಿ ಅಧಿಕಾರ ಸ್ವೀಕರಿಸಿದ್ದಾರೆ. ಕಾಣಿಯೂರು ಗ್ರಾ.ಪಂ. ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಎಂ ದೇವರಾಜ್ ರವರು ಜ. 31ರಂದು ಸೇವಾ
ನಿವೃತ್ತಿಗೊಂಡ ಹಿನ್ನಲೆಯಲ್ಲಿ ರಘು ಎನ್.ಬಿ.ಯವರನ್ನು ನೇಮಕಗೊಳಿಸಲಾಗಿದ್ದು, ಕಾಣಿಯೂರು
ಗ್ರಾ.ಪಂ.ನಲ್ಲಿ ವಾರದಲ್ಲಿ ಮೂರು ದಿವಸ ಕರ್ತವ್ಯ ನಿರ್ವಹಿಸಲಿದ್ದಾರೆ. ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ನೇಮಕಗೊಂಡಿರುವ ರಘು ಎನ್. ಬಿ ಯವರಿಗೆ ನಿವೃತ್ತಿಗೊಂಡಿರುವ ಪಿಡಿಓ ದೇವರಾಜ್ ರವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ, ಚಾರ್ವಾಕ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ, ಗ್ರಾ. ಪಂ. ಸದಸ್ಯ ಗಣೇಶ್ ಉದನಡ್ಕ, ಪಂಚಾಯತ್ ಸಿಬ್ಬಂದಿಗಳಾದ ತಿಮ್ಮಪ್ಪ ಗೌಡ ಬಿರುಕುಡಿಕೆ, ಚಿತ್ರಾ, ಕುಮಾರ್, ಶಶಿಕಲಾ ಉಪಸ್ಥಿತರಿದ್ದರು.