ಅಡ್ಕಾರು: ಸ್ಕಂದ ವುಡ್ ವರ್ಕ್ಸ್ ಮತ್ತು ಸ್ಕಂದ ಇಂಡಸ್ಟ್ರೀಸ್ ಶುಭಾರಂಭ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ತೀಕ್ಷಣ್ ಅಡ್ಕಾರು ಮಾಲಕತ್ವದ ಸ್ಕಂದ ವುಡ್ ವರ್ಕ್ಸ್ ಮತ್ತು ರಕ್ಷಿತ್ ಅಡ್ಕಾರು ಮಾಲಕತ್ವದ ಸ್ಕಂದ ಇಂಡಸ್ಟ್ರೀಸ್ ಫೆ.10ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರ ತಾಯಿ ಶ್ರೀಮತಿ ಶ್ರೀಯಾಲ ಅಡ್ಕಾರು, ಹಾಗೂ ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ಇಲ್ಲಿ ಎಲ್ಲಾ ರೀತಿಯ ಮರದ ಪೀಠೋಪಕರಣಗಳು ಹಾಗೂ ಮರದ ಕೆತ್ತನೆ ಕೆಲಸ, ಗೇಟ್, ಗ್ರಿಲ್ಸ್, ಟ್ರಸ್ ಕೆಲಸಗಳನ್ನು ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.