ಸುಳ್ಯ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಪದವಿ ವಿಭಾಗದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದದಿಂದ 42 ವಿದ್ಯಾರ್ಥಿಗಳಿಗೆ 83 ರ್‍ಯಾಂಕ್

0

ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ, ಇವರು ನಡೆಸಿದ ಆಯುರ್ವೇದ ವೈದ್ಯಕೀಯ (ಬಿ.ಎ.ಎಂ.ಎಸ್) ಪದವಿ ಪರೀಕ್ಷೆಯಲ್ಲಿ ೪೨ ವಿದ್ಯಾರ್ಥಿಗಳು ಒಟ್ಟು ೮೩ ರ್‍ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.


ಡಾ. ಖದಿಜತ್ ದಿಲ್ಶಾನ – ಶಲ್ಯ ತಂತ್ರ ಮತ್ತು ಚರಕ ಸಂಹಿತಾ ಪೂರ್ವಾರ್ಧದಲ್ಲಿ ಒಂದನೇ ರ್‍ಯಾಂಕ್, ಮೌಲಿಕ ಸಿದ್ಧಾಂತದಲ್ಲಿ ಎರಡನೇ ರ್‍ಯಾಂಕ್, ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಮೂರನೇ ರ್‍ಯಾಂಕ್, ಹಾಗೂ ಅಗದತಂತ್ರ ಮತ್ತು ಚರಕ ಸಂಹಿತಾ- ಉತ್ತರಾರ್ಧದಲ್ಲಿ ರಲ್ಲಿ ಏಳನೇ ರ್‍ಯಾಂಕ್, ಡಾ. ಪುನೀತ್ ರಾಜ್ ಆರ್. ಯಂ – ಅಗದತಂತ್ರ ಮತ್ತು ಚರಕ ಸಂಹಿತಾ ಉತ್ತರಾರ್ಧ ದಲ್ಲಿ ಎರಡನೇ ರ್‍ಯಾಂಕ್, ಶಲ್ಯ ತಂತ್ರ ನಾಲ್ಕನೇ ರ್‍ಯಾಂಕ್, ರೋಗನಿದಾನ ಆರನೇ ರ್‍ಯಾಂಕ್, ಕ್ರಿಯಾ ಶರೀರ ಏಳನೇ ರ್‍ಯಾಂಕ್, ಹಾಗೂ ಕೌಮಾರಬೃತ್ಯ ಒಂಭತ್ತನೇ ರ್‍ಯಾಂಕ್, ಡಾ. ಮಲ್ಲಿಕಾ – ಶಾಲಕ್ಯ ತಂತ್ರದಲ್ಲಿ ಎರಡನೇ ರ್‍ಯಾಂಕ್, ಸಂಸ್ಕೃತ, ಚರಕಸಂಹಿತ ಉತ್ತರಾರ್ಧ ಹಾಗೂ ಪಂಚಕರ್ಮದಲ್ಲಿ ಮೂರನೇ ರ್‍ಯಾಂಕ್, ಮೌಲಿಕ ಸಿದ್ದಾಂತದಲ್ಲಿ ಏಳನೇ ರ್‍ಯಾಂಕ್ ಹಾಗೂ ಕೌಮಾರಭೃತ್ಯದಲ್ಲಿ ಒಂಬತ್ತನೇ ರ್‍ಯಾಂಕ್, ಡಾ. ಫಾತಿಮತ್ ಸಂಸಾನ ಕೆ- ಸಂಸ್ಕೃತ ಮತ್ತು ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಆರನೇ ರ್‍ಯಾಂಕ್, ಕೌಮಾರಭೃತ್ಯ ಚರಕ ಸಂಹಿತ ಉತ್ತರಾರ್ಧ ಮತ್ತು ಪಂಚಕರ್ಮದಲ್ಲಿ ಒಂಬತ್ತನೇ ರ್‍ಯಾಂಕ್, ಡಾ. ನಮೀತಾ ಶೆಟ್ಟಿ- ರಿಸರ್ಚ್ ಮೆಥಾಡೋಲಜಿ, ಚರಕ ಸಂಹಿತ ಉತ್ತರಾರ್ಧದಲ್ಲಿ ಆರನೇ ರ್‍ಯಾಂಕ್, ಚರಕ ಸಂಹಿತಾ ಪೂರ್ವಾಧ ಮತ್ತು ಪಂಚಕರ್ಮದಲ್ಲಿ ಒಂಬತ್ತನೇ ರ್‍ಯಾಂಕ್ ಹಾಗೂ ಮೌಲಿಕ ಸಿದ್ಧಾಂತದಲ್ಲಿ ಹತ್ತನೆ ರ್‍ಯಾಂಕ್, ಡಾ. ಅನುಪಮಾ – ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ನಾಲ್ಕನೇ ರ್‍ಯಾಂಕ್ ಹಾಗೂ ಪದಾರ್ಥ ವಿಜ್ಞಾನ, ಕೌಮಾರಭೃತ್ಯ ಮತ್ತು ಪಂಚಕರ್ಮದಲ್ಲಿ ಎಂಟನೇ ರ್‍ಯಾಂಕ್, ಡಾ. ಸಂಜಿತಾ ಕೆ – ಶಲ್ಯತಂತ್ರದಲ್ಲಿ ಏಳನೇ ರ್‍ಯಾಂಕ್, ಸಂಸ್ಕೃತದಲ್ಲಿ ಎಂಟನೇ ರ್‍ಯಾಂಕ್, ಪಂಚಕರ್ಮ ಮತ್ತು ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಒಂಬತ್ತನೇ ರ್‍ಯಾಂಕ್ ಹಾಗೂ ಚರಕ ಸಂಹಿತಾ ಪೂರ್ವಾಧದಲ್ಲಿ ಹತ್ತನೇ ರ್‍ಯಾಂಕ್, ಡಾ. ನಿಶಾ ಸಿ – ಸಂಸ್ಕೃತ ಮತ್ತು ಕೌಮಾರಭೃತ್ಯದಲ್ಲಿ ಮತ್ತು ಎಂಟನೇ ರ್‍ಯಾಂಕ್ ಪಂಚಕರ್ಮದಲ್ಲಿ ಒಂಬತ್ತನೇ ರ್‍ಯಾಂಕ್, ಡಾ. ರಶ್ಮಿ ಪಿ – ಸಂಸ್ಕೃತದಲ್ಲಿ ಒಂದನೇ ರ್‍ಯಾಂಕ್ ಹಾಗೂ ರಚನಾ ಶರೀರದಲ್ಲಿ ಏಳನೇ ರ್‍ಯಾಂಕ್, ಡಾ. ಅಮೃತಾ ಎಸ್. ಎ. – ಸಂಸ್ಕೃತದಲ್ಲಿ ಮೂರನೇ ರ್‍ಯಾಂಕ್ ಹಾಗೂ ಚರಕ ಸಂಹಿತಾ ಪೂರ್ವಾಧದಲ್ಲಿ ಹತ್ತನೇ ರ್‍ಯಾಂಕ್ , ಡಾ. ಅನುಷಾ ಎಂ – ಸಂಸ್ಕೃತದಲ್ಲಿ ಎರಡನೇ ರ್‍ಯಾಂಕ್ ಹಾಗೂ ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಒಂಬತ್ತನೇ ರ್‍ಯಾಂಕ್ ,ಡಾ. ದೀಕ್ಷಾ ಎಂ – ಸಂಸ್ಕೃತ ಮತ್ತು ಅಗದ ತಂತ್ರದಲ್ಲಿ ಹತ್ತನೇ ರ್‍ಯಾಂಕ್, ಡಾ. ರೋಮ ಬಜಾಜ್ – ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಏಳನೇ ರ್‍ಯಾಂಕ್ ಮತ್ತು ಸಂಸ್ಕೃತದಲ್ಲಿ ಹತ್ತನೇ ರ್‍ಯಾಂಕ್, ಡಾ. ಶೃತಿ ಸುರೇಶ್ – ಚರಕ ಸಂಹಿತ ಉತ್ತಾರಾರ್ಧದಲ್ಲಿ ಮತ್ತು ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಒಂಬತ್ತನೇ ರ್‍ಯಾಂಕ್, ಡಾ. ಡಿ. ದಿವ್ಯ – ಪಂಚಕರ್ಮದಲ್ಲಿ ಎಂಟನೇ ಹಾಗೂ ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಒಂಬತ್ತನೇ ರ್‍ಯಾಂಕ್, ಡಾ. ದೀಪಿಕಾ ಕೆ. ಎಸ್. – ಶಾಲಕ್ಯ ತಂತ್ರದಲ್ಲಿ ಏಳನೇ ಹಾಗೂ ಪಂಚಕರ್ಮ ವಿಷಯದಲ್ಲಿ ಎಂಟನೇ ರ್‍ಯಾಂಕ್, ಸಂಸ್ಕೃತದಲ್ಲಿ ಡಾ. ರಕ್ಷಿತಾ ಎ. ಆರ್. ಆರನೇ ರ್‍ಯಾಂಕ್, ಡಾ. ಎಂ. ಶ್ರೀರಕ್ಷಾ ಬಂಗೇರ, ಡಾ. ಮುಕ್ತಾ ಪಿ. ಎಸ್., ಡಾ. ರೂಪಾಶ್ರೀ, ಹಾಗೂ ಡಾ. ಉಷಾ ಸಿ., ಕ್ರಮವಾಗಿ ಏಳನೇ ರ್‍ಯಾಂಕ್, ಡಾ. ಸುಶ್ಮಿತಾ ಎಂ. ಒಂಬತ್ತನೇ ರ್‍ಯಾಂಕ್ ಹಾಗೂ ಡಾ. ಆಲೀಶಾ ಎಸ್., ಹತ್ತನೇ ರ್‍ಯಾಂಕ್ ಮೌಲಿಕ ಸಿದ್ದಾಂತದಲ್ಲಿ ಡಾ. ಅಂಜಲಿ ಅಶೋಕ್ ಮತ್ತು ಡಾ. ಹೃದ್ಯ ಎಸ್., ಹತ್ತನೇ ರ್‍ಯಾಂಕ್, ಚರಕ ಸಂಹಿತ ಪೂರ್ವಾಧದಲ್ಲಿ ಡಾ. ಆದಿತ್ಯ ನಾರಾಯಣ ಭಟ್ ಒಂಬತ್ತನೇ ರ್‍ಯಾಂಕ್, ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಡಾ. ಪವಿತ್ರಾ ಅಜಿತ್ – ನಾಲ್ಕನೇ ರ್‍ಯಾಂಕ್ , ಡಾ. ಭೂಮಿಕಾ ಎನ್. ಎಲ್., ಮತ್ತು ಡಾ. ನಫೀಸು ಕೆ.- ಆರನೇ ರ್‍ಯಾಂಕ್, ಡಾ. ನೀತು ನಂದಕುಮಾರ್ ಸಿ. ಕೆ., ಮತ್ತು ಡಾ. ಸಾಗರ್ ಹೆಚ್. ಶೆಟ್ಟಿ- ಏಳನೇ ರ್‍ಯಾಂಕ್, ಡಾ. ದೇವಿಕಾ ಜನಾರ್ಧನ್- ಎಂಟನೇ ರ್‍ಯಾಂಕ್, ಡಾ. ಅದೈತ್ ಎಲ್. ಎಮ್., ಡಾ. ಅಂಜನಾ ವಿ., ಡಾ. ಅನು ಜೋಸ್, ಡಾ. ಕೆ. ವಿ. ಅಂಕಿತಾ, ಡಾ. ಸೂರ್ಯ ಎಂ. ಎ., ಡಾ. ವಿಜಯಲಕ್ಷ್ಮಿ ಟಿ, ಕ್ರಮವಾಗಿ ಒಂಬತ್ತನೇ ರ್‍ಯಾಂಕ್, ಡಾ. ದೀಪ್ತಿ ಪಿ. ಎಸ್., ಡಾ. ಗೀತು ಸಿ. ಎಂ., ಡಾ. ಮೇಘ ಪಟ್ಟರ್, ಡಾ. ಪ್ರಾರ್ಥನಾ ಎನ್. ಭೂಷಣ್ ಕ್ರಮವಾಗಿ ಹತ್ತನೇ ರ್‍ಯಾಂಕ್ ಪಡೆದುಕೊಂಡಿರುತ್ತಾರೆ.
ಎಲ್ಲಾ ವಿಭಾಗದ ಮುಖ್ಯಸ್ಥರುಗಳನ್ನು, ವಿಭಾಗದ ಪ್ರಾಧ್ಯಾಪಕರುಗಳನ್ನು ಹಾಗೂ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿಗಳಾದ ಅರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಉಪಾಧ್ಯಕ್ಷರಾದ ಶ್ರೀಮತಿ. ಶೋಭ ಚಿದಾನಂದ ಜೊತೆ ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ. ಸಿ., ಶ್ರೀ ಕೆ. ವಿ., ಹೇಮನಾಥ, ಖಜಾಂಜಿ ಡಾ. ಗೌತಮ್ ಗೌಡ ಹಾಗೂ ಕೌಂನ್ಸಿಲ್ ಮೆಂಬರ್‍ಸ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಡಾ. ಲೀಲಾಧರ್ ಡಿ. ವಿ., ಅಭಿನಂದಿಸಿದ್ದಾರೆ.