ಕೈಕಂಬ : ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಶ್ರೀಮತಿ ಪದ್ಮಾವತಿ ಎರ್ಮಾಯಿಲ್ ರವರಿಗೆ ಸಹಾಯಧನ ವಿತರಣೆ

0

ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈ ಕಂಬ ನಿವಾಸಿ ಶ್ರೀಮತಿ ಪದ್ಮಾವತಿ ಎರ್ಮಾಯಿಲ್ ರವರು ಕ್ಯಾನ್ಸರ್
ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಇಂದು (ಫೆ. 10 ) ರಂದು ಸುಳ್ಯ ಶಾಸಕಿ ಕು.ಭಾಗಿರಥಿ ಮುರುಳ್ಯರವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ. 1,34,000 ಪರಿಹಾರ ಸಹಾಯಧನ ವಿತರಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿಯವರ ಪ್ರಯತ್ನದಿಂದ ಸುಳ್ಯ ಶಾಸಕಿಯವರು ಮುಖ್ಯಮಂತ್ರಿ ಅವರಿಗೆ ಶಿಫಾರಸು ಮಾಡಿದ್ದರು.

ಪರಿಹಾರ ಸಹಾಯನಿಧಿ ವಿತರಣೆ ಸಂದರ್ಭದಲ್ಲಿ ಮುಖಂಡರುಗಳಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಎನ್. ಟಿ ಹೊನ್ನಪ್ಪ, ಮಗ ಪ್ರವೀಣ್, ಮನೆಯವರು, ಸ್ಥಳೀಯರು ಉಪಸ್ಥಿತರಿದ್ದರು.