ಮಡಪ್ಪಾಡಿಯಲ್ಲಿ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ ಉದ್ಘಾಟನೆ

0

ಯುವಕ ಮಂಡಲ ಮಡಪ್ಪಾಡಿ ಇದರ ಆಶ್ರಯದಲ್ಲಿ 7 ದಿನಗಳ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ ಇಂದು ಯುವಕ ಮಂಡಲ ಸಭಾಭವನ ಮಡಪ್ಪಾಡಿಯಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲ ಮಡಪ್ಪಾಡಿ ಇದರ ಅಧ್ಯಕ್ಷ ಕಿರಣ್ ಶೀರಡ್ಕ ವಹಿಸಿದ್ದರು. ಉದ್ಘಾಟನೆಯನ್ನು ಪ್ರಾ. ಕೃ. ಸಹಕಾರಿ ಸಂಘ ಮಡಪ್ಪಾಡಿ ಇದರ ಅಧ್ಯಕ್ಷ ಪಿ.ಸಿ ಜಯರಾಮ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಡಪ್ಪಾಡಿ ಗ್ರಾಮ ಪಂಚಾಯತು ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮ, ಮಡಪ್ಪಾಡಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಚಿನ್ ಬಳ್ಳಡ್ಕ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ನಿರ್ದೇಶಕ ಲೋಹಿತ್ ಬಾಳಿಕಳ, ಕಾರ್ಯಕ್ರಮದ ಸಂಯೋಜಕ ಲೋಕೇಶ್ ಪೀರನಮನೆ, ಸಂಘಟಕ ಧನ್ಯಕುಮಾರ ದೇರ್ಮಜಲು ಉಪಸ್ಥಿತರಿದ್ದರು.

ಲೋಕೇಶ್ ಪೀರನಮನೆ ಶಿಬಿರದ ಸಮಗ್ರ ಮಾಹಿತಿ ನೀಡಿದರು.

ಲೋಹಿತ್ ಬಾಳಿಕಳ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರೇಕ್ಷಿತ್ ಬೊಮ್ಮೆಟ್ಟಿ ವಂದಿಸಿದರು.