ಫೆ 21 ರಂದು ಪೂರ್ವಾಹ್ನ ಗಂಟೆ 8.00 ರಿಂದ ನಾಗದೇವರ ಸನ್ನಿಧಿಯಲ್ಲಿ ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ದಿ, ಕಲಶಪೂಜೆ, ಪ್ರತಿಷ್ಠಾಹೋಮ, ಆಶ್ಲೇಷಬಲಿ, ಕಲಶಾಭಿಷೇಕ, ತಂಬಿಲ
ದೈವಸನ್ನಿಧಿಯಲ್ಲಿ ಸ್ವಸ್ತಿ ಪುಣ್ಯಾಹವಾಚನ, ಸಪ್ತಶುದ್ಧಿ, ಪ್ರಾಸಾದಶುದ್ಧಿ, ಗಣಪತಿ ಹೋಮ, ಪ್ರಸಾದ ವಿತರಣೆ. ಸಾಯಂಕಾಲ ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ದಿಕ್ಷಾಲಕಬಲ, ದುರ್ಗಾನಮಸ್ಕಾರ ಪೂಜೆ, ಸತ್ಯನಾರಾಯಣ ಪೂಜೆ, ದೈವಗಳ ಬಿಂಬಶುದ್ಧಿ, ಬಿಂಬಧಾನ್ಯಾಧಿವಾಸ.
ಫೆ 22 ರಂದು ಪೂರ್ವಾಹ್ನ ಘಂಟೆ 6.00 ರಿಂದ ಕಲಶಪೂಜೆ, ಗಣಪತಿ ಹೋಮ ದಿವಾಗಂಟೆ 11.33ರ ವೃಷಭ ಲಗ್ನದಲ್ಲಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ದುರ್ಗಾಹೋಮ, ತಂಬಿಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಾಯಂಕಾಲ ಘಂಟೆ 4.00 ರಿಂದ ಭಜನಾ ಕಾರ್ಯಕ್ರಮ ಸಾಯಂಕಾಲ ಘಂಟೆ 6.00 ರಿಂದ ದೈವಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ, ರಾತ್ರಿ ಕಲ್ಲುರ್ಟಿ, ಕುಟುಂಬ ಪಂಜುರ್ಲಿ, ವರ್ಣಾರ ಪಂಜುರ್ಲಿ ದೈವಗಳ ನೇಮೋತ್ಸವ.
ಫೆ 23 ರಂದು ಪೂರ್ವಾಹ್ನ ಘಂಟೆ 7.00 ರಿಂದ
ಅಣ್ಣಪ್ಪ ಪಂಜುರ್ಲಿ ನೇಮೋತ್ಸವ ಧರ್ಮದೈವ ರುದ್ರಚಾಮುಂಡಿ ನೇಮೋತ್ಸವ ಗುಳಿಗ ನೇಮೋತ್ಸವ 12.30 ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಕಂಡೂರು ಕುಟುಂಬಸ್ಥರು ತಿಳಿಸಿದ್ದಾರೆ.