ಯುವಕನೊಬ್ಬ ರಿಕ್ಷಾದಲ್ಲಿ ಬರುತ್ತಿದ್ದಾಗ ತಡೆದು ಮೂರು ನಾಲ್ಕುಜನ ಯುವಕರ ತಂಡ ಹಲ್ಲೆ ನಡೆಸಿದ ಘಟನೆ ವರದಿಯಾಗಿದ್ದು, ಏಟು ತಿಂದ ಯುವಕ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಅಜ್ಜಾವರ ದ ಕಾಟಿಪಳ್ಳದಲ್ಲಿ ಈ ಘಟನೆ ನಡೆದಿದ್ದು, ಯುವಕನಿಗೆ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆ ನಡೆಸಿದವರು ಪುರುಷೋತ್ತಮ, ದಿನೇಶ್ ಮತ್ತಿತರರೆಂದು ಹೇಳಲಾಗುತ್ತಿದ್ದು, ಪೋಲೀಸರು ಸ್ಥಳಕ್ಕೆ ಬಂದಿದ್ದಾರೆ.
ನಿನ್ನೆ ರಾತ್ರಿ ಇದೇ ಯುವಕರು ಜಯರಾಮ ಎಂಬವರಿಗೂ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದ್ದು ಆ ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿ ಮಾತುಕತೆ ನಡೆದಿತ್ತೆಂದು ತಿಳಿದು ಬಂದಿದೆ. ಇದೀಗ ಅಜಿತ್ ಎಂಬವನ ಮೇಲೆ ರಸ್ತೆಯಲ್ಲೆ ಹಲ್ಲೆ ನಡೆಸಲಾಗಿದೆ.