ಉಬರಡ್ಕ ಮಿತ್ತೂರು: ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವಮಠದಲ್ಲಿ ದೇವರ ಪೂಜೆ

ಇಂದು ರಾತ್ರಿ ದೈವಗಳ ಕೂಡುವಿಕೆ - ನಾಳೆ ದೈವಗಳ ನಡಾವಳಿ

0

ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವಮಠದಲ್ಲಿ ದೇವರ ಪೂಜೆಯು ಫೆ.17ರಂದು ಜರುಗಿತು. ಫೆ.16ರಂದು ರಾತ್ರಿ ಉಗ್ರಾಣ ತುಂಬಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಫೆ.17ರಂದು ಬೆಳಿಗ್ಗೆ ಗಣಪತಿ ಹೋಮ, ನಾಗದೇವರ ಪೂಜೆ, ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ, ಅನ್ನಸಂತರ್ಪಣೆ ಜರುಗಿತು. ಈ ಸಂದರ್ಭದಲ್ಲಿ ಬಳ್ಳಡ್ಕ ಕುಟುಂಬಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಇಂದು ರಾತ್ರಿ ದೈವಸ್ಥಾನದಲ್ಲಿ ದೈವಗಳ ಕೂಡುವಿಕೆ, ಬಳಿಕ ಉಪದೈವಗಳ ಕೋಲ ನಡೆಯಲಿದ್ದು, ನಾಳೆ ಬೆಳಿಗ್ಗೆ ರುದ್ರಚಾಮುಂಡಿ ಮತ್ತು ಧೂಮಾವತಿ ದೈವಗಳ ನಡಾವಳಿ ಜರುಗಲಿದೆ.