ಫೆ.13ರಿಂದ 17ರ ವರೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 44 ನೆ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಸುಳ್ಯದ ಸರಿತಾ ನಾಗೇಶ್ ಶೆಟ್ಟಿ ಯವರು ಗುಂಡು ಎಸೆತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ನೆದರ್ಲ್ಯಾಂಡ್ ನಲ್ಲಿ ನಡೆಯುವ ಏಷ್ಯನ್ ಲೆವೆಲ್ ಮಾಸ್ಟರ್ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ ಇವರು ಸುಳ್ಯದ ಮೆಸ್ಕಾಂ ಬಳಿ ಇರುವ ಬಿಗ್ ಚೆಫ್ ಹೋಟೆಲ್ ನ ಮಾಲಕರಾದ ನಾಗೇಶ್ ಕೆ ಶೆಟ್ಟಿ ಇವರ ಪತ್ನಿ.