ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದ 30ನೇ ವರ್ಷದ ಏಕಾಹ ಭಜನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಜಾಲ್ಸೂರು ಗ್ರಾಮದ ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರದ 30ನೇ ವರ್ಷದ ಏಕಾಹ ಭಜನೆಯ ಆಮಂತ್ರಣ ಪತ್ರಿಕೆಯು ಮಂದಿರದಲ್ಲಿ ಫೆ.17ರಂದು ವಿಶೇಷ ಪ್ರಾರ್ಥನೆಯೊಂದಿಗೆ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು, ಜೊತೆ ಕಾರ್ಯದರ್ಶಿ ಉದಯಕುಮಾರ್ ಆರ್ತಾಜೆ, ಖಜಾಂಜಿ ಶ್ರೀಮತಿ ಲೀಲಾವತಿ ನಡುಮನೆ, ಸದಸ್ಯರುಗಳಾದ ಶ್ರೀಮತಿ ಚಂದ್ರಕ್ಕ ನಡುಮನೆ, ಶ್ರೀಧರ ಪೂಜಾರಿ ಸೋಣಂಗೇರಿ, ಹೇಮಂತ್, ರಕ್ಷಿತ್,ಶರತ್, ಸಂಚಾಲಕ ಸತ್ಯಶಾಂತಿ ತ್ಯಾಗ ಮೂರ್ತಿ ಕುಕ್ಕನ್ನೂರು ಉಪಸ್ಥಿತರಿದ್ದರು.